ನೆಲ್ಯಾಡಿ: ಜ್ಞಾನೋದಯ ಬೆಥನಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ರೆ.ಫಾ. ತೋಮಸ್ ಬಿಜಿಲಿ ಅವರ ನೇತೃತ್ವದಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ರೆ.ಫಾ. ಮೆಲ್ವಿನ್ ಓ.ಐ.ಸಿ.ಯವರು ಮಾತನಾಡಿ, ಪರಿಸರವನ್ನು ಶುದ್ಧವಾಗಿ ಕಾಪಾಡುವುದರಿಂದ ನಾವು ಹೇಗೆ ಸುರಕ್ಷಿತರಾಗಿ ಬದುಕಬಹುದೆಂದು ತಿಳಿಸಿದರು. ಅತಿಥಿಯಾಗಿದ್ದ ಸುಬ್ರಹ್ಮಣ್ಯ ವಲಯದ ಅರಣ್ಯಾಧಿಕಾರಿ ರವಿಚಂದ್ರನ್ ಪಡುಬೆಟ್ಟರವರು ಮಾತನಾಡಿ, ಪರಿಸರ ಚೆನ್ನಾಗಿರಬೇಕಾದರೆ ಮರಗಳ ಅಗತ್ಯವಿದೆ. ಮರಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದೆ. ಅಭಿವೃದ್ಧಿಯ ಭಾಗವಾಗಿ ಮರಗಿಡಗಳು ನಾಶವಾಗುತ್ತಿದೆ, ರಸ್ತೆ ಅಗಲೀಕರಣದ ಭಾಗವಾಗಿ ನೆಲ್ಯಾಡಿ ಪೇಟೆಯ ಚಿತ್ರಣವೇ ಬದಲಾಗಿದೆ. ಪ್ರಾಣಿಗಳನ್ನು ಸ್ವಚ್ಛಂದವಾಗಿ ಬದುಕಲು ಬಿಡಬೇಕು. ಅದಕ್ಕೆ ಪರಿಸರ ಬೇಕು, ಸಾಲುಮರದ ತಿಮ್ಮಕ್ಕನ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು, ಪ್ರಕೃತಿಯನ್ನು ಸಂರಕ್ಷಿಸಬೇಕು, ಸ್ವಚ್ಛ ಭಾರತ ವಾಗಬೇಕಾದರೆ ಸ್ವಚ್ಛ ಮನಸ್ಸು ಬೇಕು. ಇಂತಹ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಹೇಳಿದರು.



ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಮಾಡಿ, ಪರಿಸರ ಗೀತೆ ಹಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ಥಾಮಸ್ ಬಿಜಿಲಿ ಓ. ಐ.ಸಿ, ಸಂಚಾಲಕರಾದ ರೆ.ಫಾ. ಮೆಲ್ವಿನ್ ಮ್ಯಾಥ್ಯೂ, ರೆ.ಫಾ. ಜೇಮ್ಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ರಹಾಂ ಕೆ.ಪಿ, ಉಪ ಪ್ರಾಂಶುಪಾಲ ಜೋಸ್ ಎಂ.ಜೆ ಉಪಸ್ಥಿತರಿದ್ದರು. ನೀಮ ನಿರೂಪಿಸಿದರು. ಅಬ್ದಯಲ್ ಸ್ವಾಗತಿಸಿ, ಕ್ಷಿತಿ ಜೈನ್ ವಂದಿಸಿದರು. ಆಗ್ನೆಸ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.
