ಕಾಮಗಾರಿಯ ಪಟ್ಟಿ ಕಳುಹಿಸಿ-ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ

0

ಪುತ್ತೂರು: ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಆಗಬೇಕಾದ ವಿವಿಧ ಕಾಮಗಾರಿಗಳ ಪಟ್ಟಿ ಕಳುಹಿಸಿಕೊಡುವಂತೆ ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಪುತ್ತೂರು ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು ಅನುದಾನವನ್ನು ಹಂಚಿಕೆ ಮಾಡುವ ಉದ್ದೇಶದಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ವಲಯಾಧ್ಯಕ್ಷರುಗಳು ಮತ್ತು ಬೂತ್ ಅಧ್ಯಕ್ಷರುಗಳು ಕಾಮಗಾರಿಯ ಪಟ್ಟಿಯನ್ನು ಸಿದ್ದಪಡಿಸಿ ಶಾಸಕರ ಕಚೇರಿಗೆ ತಲುಪಿಸುವಂತೆ ಅಥವಾ ಶಾಸಕರ ಪಿಎ ಬಳಿ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here