ಬಲ್ನಾಡು:ಸ್ಕೂಟರ್ ಸ್ಕಿಡ್ ದಂಪತಿಗೆ ಗಾಯ

0

ಪುತ್ತೂರು:ಸ್ಕೂಟರೊಂದು ಸ್ಕಿಡ್ ಆಗಿ ಬಿದ್ದು ಅದರಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಬಲ್ನಾಡು ಗ್ರಾಮ ಆನಂದಸಾಗರ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬಲ್ನಾಡು ಗ್ರಾಮದ ಸುಂಕದಮೂಲೆ ನಿವಾಸಿ ಪುರಂದರ ಆರ್ ಮತ್ತು ಅವರ ಪತ್ನಿ ಮಲ್ಲಿಕಾ ಬಿ.ಅವರು ಗಾಯಗೊಂಡವರು.ಮಲ್ಲಿಕಾ ಅವರು ಪುತ್ತೂರಿನಿಂದ ಬಲ್ನಾಡು ಕಡೆ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಆನಂದಸಾಗರ ತಲುಪುತ್ತಿದ್ದಂತೆ ಸ್ಕಿಡ್ ಆಗಿ ಮಗುಚಿ ಬಿದ್ದಿದೆ.ಪರಿಣಾಮ ಸವಾರೆ ಮಲ್ಲಿಕಾ ಮತ್ತು ಸಹಸವಾರನಾಗಿದ್ದ ಅವರ ಗಂಡ ಪುರಂದರ ಅವರು ಗಾಯಗೊಂಡಿದ್ದಾರೆ.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here