ನೆಲ್ಯಾಡಿ: ಉಪ್ಪಿನಂಗಡಿ ವಲಯ ಮಟ್ಟದ ಚೆಸ್ ಪಂದ್ಯಾಟ ಜು.24ರಂದು ಗೋಳಿತಟ್ಟು ಉನ್ನತ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ನಿವೃತ್ತ ದೈ.ಶಿ.ಶಿಕ್ಷಕ ಉಲಹನ್ನನ್ ಪಿ.ಎಂ.ರವರು ಪಂದ್ಯಾಟವನ್ನು ಉದ್ಘಾಟಿಸಿ ಚೆಸ್ ಆಟದ ಮಾಹಿತಿ ಮತ್ತು ನಿಯಮಗಳನ್ನು ತಿಳಿಸಿದರು. ವಳಾಲು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಚಕ್ರಪಾಣಿ ಬಾಕಿಲರವರು ಚೆಸ್ ಪಂದ್ಯಾಟದ ವಿವರ ನೀಡಿದರು. ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್‌ರವರು ಶುಭಹಾರೈಸಿದರು.
ಗೋಳಿತಟ್ಟು ಗ್ರಾ.ಪಂ.ಸದಸ್ಯ ಬಾಬು ಪೂಜಾರಿಯವರು ಅಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ ಎಸ್ ಉಪಸ್ಥಿತರಿದ್ದರು.
ಬಜತ್ತೂರು ಕ್ಲಸ್ಟರ್‌ನ ಸಿಆರ್‌ಪಿ ಮಂಜುನಾಥ ಕೆ.ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಬಿ.ಎಂ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಅಬ್ದುಲ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು. ಜೋನ್ ಕೆ.ಪಿ., ತೇಜಸ್ವಿ ಕೆ, ಯಶಸ್ವಿನಿಯವರು ಸಹಕರಿಸಿದರು. ಬಜತ್ತೂರು, ನೆಲ್ಯಾಡಿ ಹಾಗೂ ಉಪ್ಪಿನಂಗಡಿ ಕ್ಲಸ್ಟರ್‌ನ ೧೦೩ ವಿದ್ಯಾರ್ಥಿಗಳು ಭಾಗವಹಿಸಿದ್ದರು.