ಅಧ್ಯಕ್ಷೆ: ಕುಮಾರಿ ಹಲೀಮಾ ಶೈಮಾ, ಕಾರ್ಯದರ್ಶಿ: ಕುಮಾರಿ ನಿಶ್ಮಾ ರೈ
ಪುತ್ತೂರು: ಪುತ್ತೂರು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಪ್ರಧಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷೆ ಕೊರಳ ಪಟ್ಟಿಯನ್ನು ಹಾಕುವುದರ ಮೂಲಕ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಶಶಿಧರ್ ಕಜೆಯವರು ಸೇವಾ ಮನೋಭಾವ ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸುವುದು, ಸಮಾಜದ ಹಿತವನ್ನು ಬಯಸುವುದು ರೋಟರಿಯ ಮುಖ್ಯ ಉದ್ದೇಶವಾಗಿದೆ. ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಸಂಸ್ಥೆಯು ಸಮಾಜದ ಸ್ವಾಸ್ಥ್ಯವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕರಿಸುತ್ತಿದೆ. ಪ್ರತಿಯೊಬ್ಬರು ಸಮಾಜದ ಉದ್ದಾರಕ್ಕಾಗಿ ಸೇವೆಗೈಯುತ್ತಾ ಉತ್ತಮ ಯುವ ಸಮುದಾಯ ಎನಿಸಿಕೊಳ್ಳುವಂತಾಗಬೇಕು ಎಂದರು.
ರೋಟರಿ ಪುತ್ತೂರು ಸಿಟಿಯ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ ಮಗುವಿನ ಬೌದ್ಧಿಕ ಬೆಳವಣಿಗೆ ಹಾಗೂ ಶಾಲೆಯ ಮೇಲಿನ ಪ್ರೀತಿ ಎಂಬ ಎರಡು ಅಂಶಗಳ ಬಗ್ಗೆ ತಿಳಿಯಪಡಿಸಿದರು. ರೋಟರಿಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಹಲಿಮತ್ ಶೈಮಾರವರು ಮಾತನಾಡಿ ಸರ್ವರ ಸಹಕಾರದೊಂದಿಗೆ ಉತ್ತಮ ಸೇವೆ ಮಾಡುತ್ತಾ ರೋಟರಿ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆ, ನಾವು ಎಲ್ಲಾ ಸದಸ್ಯರು ಒಟ್ಟಾಗಿ ಸಹಕರಿಸಿ ಕಾರ್ಯನಿರ್ವಹಿಸೋಣ ಎಂದರು.
ರೋಟರಿ ಸಿಟಿಯ ಜಾನ್ ಕುಟಿನ್ಹಾ, ಜೋ ಡಿಸೋಜಾ, ದಯಾನಂದ, ಸ್ವಾತಿ ಮಲ್ಲಾರ, ಅಕ್ಷತಾ ಶೆಣೈ, ಪ್ರಶಾಂತ್ ಪೈ, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ರೋಸಲಿನ್ ಲೋಬೊರವರು ಸ್ವಾಗತಿಸಿ, ಇಂಟರ‍್ಯಾಕ್ಟ್ ಕಾರ್ಯದರ್ಶಿ ನಿಶ್ಮಾ ರೈ ವಂದಿಸಿದರು. ಕುಮಾರಿ ರಿಂಶಾ ಅಲಿ ಹಾಗೂ ಕುಮಾರಿ ಸೌಹಾ ಕಾರ್ಯಕ್ರಮ ನಿರೂಪಿಸಿದರು.
ಇಂಟರ‍್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆಯಾಗಿ ಕು.ಹಲಿಮಾ ಶೈಮಾ, ಕಾರ್ಯದರ್ಶಿಯಾಗಿ ಕು. ನಿಶ್ಮಾ ರೈ, ಕು. ತಾಜುನ್ನೀಸ ಉಪಾಧ್ಯಕ್ಷೆಯಾಗಿ, ಸೌಜನ್ಯ ಜೊತೆ ಕಾರ್ಯದರ್ಶಿಯಾಗಿ, ಕು.ಫಿಜಾ ಫಾತಿಮಾ ಕೋಶಾಧಿಕಾರಿಯಾಗಿ, ಸಾಜಂಟ್ ಎಟ್ ಆರ್ಮ್ಸ್ ಆಗಿ ಸನುಫಾ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಇನ್ಶಾ ಫಾತಿಮಾ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕು.ನಫೀಸತ್ ಫಿಜಾ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಕು.ರಾಶಿ, ಇನ್ಸ್ ಟಿಟ್ಯೂ?ನಲ್ ಸರ್ವಿಸ್ ನಿರ್ದೇಶಕರಾಗಿ ನಿಹಾರಿಕಾ ಆಯ್ಕೆಯಾದರು. ರೋಟರಿ ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇಂಟರ‍್ಯಾಕ್ಟ್ ಸಿಬ್ಬಂದಿ ಸಂಯೋಜಕರಾಗಿ ಸುಷಾ ಕ್ರಾಸ್ತಾ ಹಾಗೂ ಪಲ್ಲವಿ ಭಟ್ ಆಯ್ಕೆಯಾಗಿದ್ದಾರೆ.