ಪವಿತ್ರ ಮಕ್ಕಾದಲ್ಲಿ ಉಮ್ರಾ ನಿರ್ವಹಣೆಯಲ್ಲಿರುವ ಗಲ್ಫ್ ಟೂರ್ಸ್ ಉಮ್ರಾ ಯಾತ್ರಾರ್ಥಿಗಳ ತಂಡದ ಸದಸ್ಯರಿಂದ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಉಮ್ರಾ ನಿರ್ವಹಿಸಿ, ದೇಶದ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಿತು. ಯಾತ್ರಾ ತಂಡದ ಚೀಫ್ ಅಮೀರ್ ಸಿರಾಜುದ್ದೀನ್ ಫೈಝಿಯವರು
ದೇಶದ ಕ್ಷೇಮಕ್ಕಾಗಿಯೂ ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮರುಸ್ಥಾಪನೆಗೊಳ್ಳಲು ಪ್ರಾರ್ಥಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವರಿಸಿದ ಸಿರಾಜುದ್ದೀನ್ ಫೈಝಿಯವರು ಸ್ವಾತಂತ್ರ್ಯ ಹೋರಾದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯದ ಹೋರಾಟವು ಸರ್ವಧರ್ಮೀಯರ ಒಗ್ಗಟ್ಟಿನ ಸೌಹಾರ್ದತೆಯ ಹೋರಾಟವಾಗಿದ್ದು, ಸ್ವತಂತ್ರ ದೇಶವು ಮುಂದೆ ಸಾಗಲು ಅದೇ ಸೌಹಾರ್ದತೆ ಅಗತ್ಯವಾಗಿದೆ ಎಂದರು.
ಗಲ್ಫ್ ಟೂರ್ಸ್ ಮಾಲಕರಾದ ಸುಲೈಮಾನ್ ಹಾಜಿ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಉಸ್ತಾದರುಗಳಾದ ಅಬ್ಬಾಸ್ ದಾರಿಮಿ ಕೆಲಿಂಜ, ಅಬ್ದುರ್ರಹ್ಮಾನ್ ಫೈಝಿ ಫಲಿಮಾರ್, ಖಾಲಿದ್ ಸಅದಿ ಬೇಂಗಿಲ, ಸೈದಾಲಿ ಮುಸ್ಲಿಯಾರ್, ಹಲವಾರು ಮೊಹಲ್ಲಾಗಳಿಂದ ಯಾತ್ರಾರ್ಥಿಗಳಾಗಿ ಬಂದ ಜಮಾಅತ್ ಸಮಿತಿ ಸಾರಥಿ ಗಳು, ವಿವಿಧ ಸಂಘ ಸಂಸ್ಥೆಗಳ ಯುವ ಕಾರ್ಯಕರ್ತರು ಸೇರಿದಂತೆ ಎರಡು ಯಾತ್ರಾ ತಂಡಗಳಲ್ಲಿದ್ದ ಸುಮಾರು 90ರಷ್ಟು ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.