*ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿದರೆ ಸಂಸ್ಕೃತಿಯ ಉಳಿವು- ಗುಡ್ಡಪ್ಪ ಬಲ್ಯ
*ಸಂಘ ಬಲಿಷ್ಠವಾದಾಗ ಹಕ್ಕುಗಳ ಪ್ರತಿಪಾದನೆ – ವಿಶ್ವನಾಥ ಗೌಡ ಬನ್ನೂರು
ಪುತ್ತೂರು: ಪ್ರಸ್ತುತ ದಿನಗಳಲ್ಲಿ ಮಾಯವಾಗುತ್ತಿರುವ ಕೌಟುಂಬಿಕ ಸಂಬಂಧಗಳನ್ನು ಮತ್ತೆ ಗಟ್ಟಿ ಗೊಳಿಸಿದಾಗ ನಮ್ಮ ಆಚಾರ ವಿಚಾರಗಳು, ಸಂಸ್ಕೃತಿಗಳ ಉಳಿವು ಸಾಧ್ಯ ಎಂದು ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಅವರು ಹೇಳಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಬನ್ನೂರು ಗ್ರಾಮ ಸಮಿತಿಯಿಂದ ಆ.15ರಂದು ಬನ್ನೂರು ಗ್ರಾಮದ ನೀರ್ಪಾಜೆ ರಮೇಶ್ ಗೌಡ ವರ ಮನೆಯಲ್ಲಿ ನಡೆದ ಆಟಿ ಕೂಟ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಸೋಲನ್ನು ಸವಲಾಗಿ ಸ್ವೀಕರಿಸಲು ಕಲಿಸಬೇಕು. ಹಿರಿಯರು ಆಚರಿಸಿಕೊಂಡು ಬಂದಿರುವ ಸಂಸ್ಕಾರ ಸಂಸ್ಕೃತಿಯ ಹಿಂದಿನ ಮೂಲನಂಬಿಕೆಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಬೇಕೆಂದರು.
ಸಂಘ ಬಲಿಷ್ಠವಾದಾಗ ಹಕ್ಕುಗಳ ಪ್ರತಿಪಾದನೆ:
ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಬನ್ನೂರು ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಅವರು ಮಾತನಾಡಿ ಸಂಘವು ಬಲಿಷ್ಠವಾದಾಗ ನಮ್ಮ ಹಕ್ಕುಗಳನ್ನು ಪ್ರತಿ ಪಾದಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮದಲ್ಲಿ ಎಲ್ಲರು ಭಾವಹಿಸುವುದು ಮುಖ್ಯ ಎಂದರು. ಕುಂಟ್ಯಾನ ಊರ ಗೌಡ ಈಶ್ವರ ಗೌಡ ಗೋಳ್ತಿಲ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ರವಿ ಮುಂಗ್ಲಿಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ರಮೇಶ್ ದಂಪತಿಯನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ಸ್ವಾಗತಿಸಿ, ಗ್ರಾಮ ಸಮಿತಿಯ ಗೌರವಾಧ್ಯಕ್ಷ ಚಂದ್ರಾಕ್ಷ ಬಿ.ಎನ್ ವಂದಿಸಿದರು. ರಾಧಾಕೃಷ್ಣ ಗೌಡ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸ್ವಸಹಾಯ ಸಂಘದ ವತಿಯಿಂದ ಮಾಡಿರುವ ಆಟಿ ತಿಂಗಳ ತಿಂಡಿ ತಿನಸುಗಳನ್ನು ಸಹ ಭೋಜವಾಗಿ ನೀಡಲಾಯಿತು.