ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

0

ಅಧ್ಯಕ್ಷರಾಗಿ ಸಲಾಂ ಬಿಲಾಲ್, ಉಪಾಧ್ಯಕ್ಷರಾಗಿ ರೇಷ್ಮಾ ಶಶಿ ಆಯ್ಕೆ

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಯಾಕೂಬ್ ಯು.ಯಾನೆ ಸಲಾಂ ಬಿಲಾಲ್ ಹಾಗೂ ಉಪಾಧ್ಯಕ್ಷರಾಗಿ ರೇಷ್ಮಾ ಶಶಿ ಅವರು ಆಯ್ಕೆ ಯಾಗಿದ್ದಾರೆ. ಇಬ್ಬರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ.


ಆ.19ರಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. 14 ಸದಸ್ಯ ಬಲದ ನೆಲ್ಯಾಡಿ ಗ್ರಾಮ ಪಂಚಾಯತ್ ನಲ್ಲಿ 8 ಕಾಂಗ್ರೆಸ್ ಬೆಂಬಲಿತ ಹಾಗೂ 6 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೆಲ್ಯಾಡಿ 4ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಯಾಕೂಬ್ ಯು.ಯಾನೆ ಸಲಾಂ ಬಿಲಾಲ್, 3ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಅಬ್ದುಲ್ ಜಬ್ಬಾರ್, 5ನೇ ವಾರ್ಡ್ ನ ಸದಸ್ಯ ರವಿಪ್ರಸಾದ್ ಶೆಟ್ಟಿ ಹಾಗೂ 1ನೇ ವಾರ್ಡ್ ಸದಸ್ಯ ಆನಂದ ಪಿಲವೂರು ನಾಮಪತ್ರ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಆನಂದ ಪಿಲವೂರು ಅವರು ನಾಮಪತ್ರ ಹಿಂತೆಗೆದುಕೊಂಡರು. ಕಾಂಗ್ರೆಸ್ ಬೆಂಬಲಿತ ಸದಸ್ಯ ಯಾಕೂಬ್ ಯು ಯಾನೆ ಸಲಾಂ ಬಿಲಾಲ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ರವಿಪ್ರಸಾದ್ ಶೆಟ್ಟಿ ಯವರು ಕಣದಲ್ಲಿ ಉಳಿದಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಯಾಕೂಬ್ ಯು ಯಾನೆ ಸಲಾಂ ಬಿಲಾಲ್ ಅವರು 8 ಮತ ಪಡೆದು ಅಧ್ಯಕ್ಷ ರಾಗಿ ಆಯ್ಕೆ ಯಾದರು.ಬಿಜೆಪಿ ಬೆಂಬಲಿತ ಸದಸ್ಯ ರವಿಪ್ರಸಾದ್ ಶೆಟ್ಟಿ ಯವರು 6 ಮತ ಪಡೆದು ಕೊಂಡರು.


ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರೇಷ್ಮಾ ಶಶಿ ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ಚೇತನಾ ಅವರು ನಾಮಪತ್ರ ಸಲ್ಲಿಸಿದರು. ಚುನಾವಣೆ ಯಲ್ಲಿ ರೇಷ್ಮಾ ಶಶಿ ಅವರು 10 ಮತ ಪಡೆದು ಉಪಾಧ್ಯಕ್ಷ ರಾಗಿ ಆಯ್ಕೆ ಯಾದರು. ಚೇತನಾ ಅವರಿಗೆ ನಾಲ್ಕು ಮತ ಲಭಿಸಿತ್ತು.
ಸದಸ್ಯರಾದ ಚೇತನಾ, ಅಬ್ದುಲ್ ಜಬ್ಬಾರ್, ಜಯಂತಿ ಮಾದೇರಿ, ಆನಂದ ಪಿಲವೂರು, ಶ್ರೀಲತಾ ಸಿ.ಹೆಚ್., ಮಹಮ್ಮದ್ ಇಕ್ಬಾಲ್, ರೇಷ್ಮಾ ಶಶಿ, ಉಷಾ ಜೊಯಿ, ಪಿ.ಜಯಾನಂದ ಬಂಟ್ರಿಯಾಲ್, ಜಯಲಕ್ಷ್ಮೀ ಪ್ರಸಾದ್, ಪುಷ್ಪಾ ಪಡುಬೆಟ್ಟು, ಯಾಕೂಬ್ ಯು ಯಾನೆ ಸಲಾಂ ಬಿಲಾಲ್, ಪ್ರಕಾಶ್ ಕೆ., ರವಿಪ್ರಸಾದ್ ಶೆಟ್ಟಿ ಅವರು ಚುನಾವಣಾ ಪ್ರಕ್ರಿಯೆ ಯಲ್ಲಿ ಭಾಗವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಆನಂದ ಗೌಡ, ಲೆಕ್ಕ ಸಹಾಯಕ ಅಂಗುರವರು ಸಹಾಯಕ ಚುನಾವಣಾಧಿಕಾರಿ ಗಳಾಗಿದ್ದರು. ಸಿಬ್ಬಂದಿ ಗಳಾದ ಶಿವಪ್ರಸಾದ್, ಭವ್ಯ, ಲಲಿತಾ, ಗಿರೀಶ್, ಸೋಮಣ್ಣ, ಲೀಲಾವತಿ, ಅಬ್ದುಲ್ ರಹಿಮಾನ್ ಸಹಕರಿಸಿದರು.

ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ :
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ನ್ಯಾಯ ವಾದಿ ಇಸ್ಮಾಯಿಲ್ ನೆಲ್ಯಾಡಿ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆಪಿಸಿಸಿ ಸದಸ್ಯ ಕೆ.ಪಿ.ತೋಮಸ್, ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ ಶುಭ ಹಾರೈಸಿದರು. ಕೆಪಿಸಿಸಿ ಸದಸ್ಯ ಕೃಷ್ಣಪ್ಪ , ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕಾಂಗ್ರೆಸ್ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ಜೋಶ್ ಕೆ.ಜೆ. ಕಾಂಗ್ರೆಸ್ ಮುಖಂಡ ರಾದ ಎ.ಸಿ.ಜಯರಾಜ್ , ಪೂವಪ್ಪ ಕರ್ಕೇರ, ಸೀತಾರಾಮ ಗೌಡ ಕಾನಮನೆ, ಕೆ ಪಿ ಅಬ್ರಹಾಂ, ನಝೀರ್ ಮೊರಂಕಳ , ಜಾನ್ಸನ್ ಮಾದೇರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here