ಇಂದು ನೆಲ್ಯಾಡಿಯಲ್ಲಿ FMAK ಪಿಕ್ & ವಿನ್ ಲಕ್ಕಿ ಸ್ಕೀಮ್ ಶುಭಾರಂಭ

0

ನೆಲ್ಯಾಡಿ: ಎಫ್‌ಮೆಕ್ ಗ್ರೂಫ್ಸ್‌ನವರ FMAK ಪಿಕ್ & ವಿನ್ ಲಕ್ಕಿ ಸ್ಕೀಮ್ ಸೆ.2ರಂದು ಸಂಜೆ 4.30ಕ್ಕೆ ನೆಲ್ಯಾಡಿ ದುರ್ಗಾಶ್ರೀ ಟವರ್‍ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರು ಉದ್ಘಾಟಿಸಲಿದ್ದಾರೆ. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲುರವರು ಲೋಗೋ ಬಿಡುಗಡೆ ಮಾಡಲಿದ್ದಾರೆ.

ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ಕರಾವಳಿ ಫಿಶರಿಸ್‌ನ ಅಬ್ದುಲ್ ರಜಾಕ್ ಎನ್., ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸಿಟಿ, ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಹನೀಫ್ ಕರಾವಳಿ, ಎಫ್‌ಮೆಕ್ ಗ್ರೂಫ್ಸ್‌ನ ಮೇನೇಜಿಂಗ್ ಡೈರೆಕ್ಟರ್ ಫಾರೀಝ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here