ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಜೀರ್ಣೋದ್ಧಾರದ ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲಿ ತೋರಿಬಂದ ದೋಷಗಳ ಪರಿಹಾರರ್ಥವಾಗಿ ದ್ವಾದಶ ಕಲಶಾಭಿಷೇಕ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಭಜನಾ ಸೇವೆ ಮತ್ತು ಸಮಜ ಭಾಂದವರಿಂದ ಮುಷ್ಟಿ ಕಾಣಿಕೆ, ದ್ರವ್ಯ ಕಾಣಿಕೆ ಹೋಮಗಳು ನಡೆದವು.
ಈ ಸಂದರ್ಭದಲ್ಲಿ ಶ್ರೀ ದೇವಳ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಕೆ.ಅನಂತರಾಯ ಕಿಣಿ, ಯು. ನಾಗರಾಜ ಭಟ್, ದೇವಿದಾಸ ಭಟ್ ಹಾಗೂ ಭಕ್ತಾಧಿಗಳಾದ ಕರಾಯ ಗಣೇಶ ನಾಯಕ್, ಗೋಕುಲ್‌ದಾಸ ಭಟ್, ಎಚ್.ವಾಸುದೇವ ಪ್ರಭು, ಉಜಿರೆ ಪ್ರಭಾತ್ ಭಟ್, ಗಿರಿಧರ್ ನಾಯಕ್, ಉಪೇಂದ್ರ ಪೈ ಕೆ., ನರಸಿಂಹ ನಾಯಕ್, ನೇಜಿಕಾರ್ ಸುರೇಶ ಪೈ, ಹರೀಶ ಪೈ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕರಾದ ಪಿ.ನರಸಿಂಹ ಭಟ್, ಸುಬ್ರಹ್ಮಣ್ಯ ಭಟ್, ತಿವಿಕ್ರಮ ಭಟ್, ರವೀಂದ್ರ ಭಟ್, ಎಸ್. ಶ್ರೀನಿವಾಸ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.