





ರಾಮಕುಂಜ: ರಾಮಕುಂಜ ಗ್ರಾಮದ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 20ವರ್ಷ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ನಾರಾಯಣ ಪಿ.ಎಸ್.ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ಕುಂಡಾಜೆ ಶಾಲೆಯಲ್ಲಿ ನಡೆಯಿತು.


ಶಾಲಾ ಎಸ್‌ಡಿಎಂಸಿ, ಪೋಷಕರು ಮತ್ತು ಶಿಕ್ಷಕರ ವತಿಯಿಂದ ಹಾರ, ಶಾಲು,ಸ್ಮರಣಿಕೆ,ಫಲಪುಷ್ಪಗಳನ್ನಿತ್ತು ನಾರಾಯಣ ಪಿ.ಎಸ್.ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲಾ ಮುಖ್ಯಶಿಕ್ಷಕಿ ಪುಷ್ಪಾವತಿ ಎಂ.,ಅಭಿನಂದನಾ ಮಾತುಗಳನ್ನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.





ಸನ್ಮಾನ ಸ್ವೀಕರಿಸಿದ ನಾರಾಯಣ ಪಿ.ಎಸ್.ರವರು ಕೃತಜ್ಞತೆ ಸಲ್ಲಿಸಿದರು. ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್‌ಕುಮಾರ್ ಬಾನಡ್ಕ, ದತ್ತಿನಿಧಿ ಸಮಿತಿ ಅಧ್ಯಕ್ಷ ಇಂದುಶೇಖರ ಶೆಟ್ಟಿ ಕುಕ್ಕೇರಿ, ಮೊಗೇರ ಸಂಘದ ಅಧ್ಯಕ್ಷ ದಿನೇಶ ಗಾಣಂತಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮುತ್ತಪ್ಪ ಗೌಡ, ಆಶಾ ಕಾರ್ಯಕರ್ತೆ ಪದ್ಮಾವತಿ, ಬಾಲವಿಕಾಸ ಸಮಿತಿಯ ಜಯರತ್ನ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಹಿರಿಯರಾದ ಕರಿಯ ಗಾಣಂತಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಪ್ರೇಮಾ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಶ್ರೀ ಕ್ಷೇ.ಧ.ಗ್ರಾ.,ಯೋ.ಪದಾಧಿಕಾರಿಗಳು, ಮೊಗೇರ ಸಂಘದ ಪದಾಧಿಕಾರಿಗಳು, ಒಡಿಯೂರು ಘಟ ಸಮಿತಿ ಸದಸ್ಯರು, ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










