ಪುತ್ತೂರು: ಪುತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆ ಇದರ 2023 – 24 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆಯು ಸೆ.3ರಂದು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಮರಾಟಿ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಗಂಗಾಧರ ಕೌಡಿಚ್ಚಾರು, ಉಪಾಧ್ಯಕ್ಷರಾಗಿ ರವೀಶ್ ತಾರಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಪಾಣಾಜೆ ಮತ್ತು ಕೋಶಾಧಿಕಾರಿಯಾಗಿ ವಿಜಯ ಆರ್ಲಪದವು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಸಿ.ಎಚ್ ಚಾಕೊಟೆ ಇರ್ದೆ, ಸಂಘಟನಾ ಕಾರ್ಯದರ್ಶಿಗಳಾಗಿ ದಿನೇಶ್ ಕುಮಾರ್ ಕೆ ಸಿ.ಟಿ ಗುಡ್ಡೆ. ವಸಂತ ಆರ್ಯಾಪು, ಅಶೋಕ್ ನಾಯ್ಕ್ ಸೊರಕೆ , ಗೋಪಾಲ ನಾಯ್ಕ ಪಡುಮಲೆ, ವೆಂಕಪ್ಪ ಬರೆಪ್ಪಾಡಿ, ನವೀನ್ ಕುಮಾರ್.ಕೆ ಚೆನ್ನಾವರ, ಸಂದೀಪ್ ಆರ್ಯಾಪು,ಕ್ರೀಡಾ ಕಾರ್ಯದರ್ಶಿಗಳಾಗಿ ಈಶ್ವರ ಮಿತ್ತಡ್ಕ, ಜಗದೀಶ್ ಎಲಿಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಯತೀಶ್ ಕೆ.ಎಂ ಪುಣ್ಚಪಾಡಿ, ಕಾರ್ತಿಕ್ ಆರ್ಯಾಪು ಆಯ್ಕೆಯಾದರು, ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಜಯ ಮಠಂತಬೆಟ್ಟು , ನವೀನ್ ಎರ್ಕಮೆ ಬರೆಪ್ಪಾಡಿ, ಸ್ವಾತಿ ಎನ್ , ಕುಸುಮಾಧರ , ವಿನೋದ್ ಮೇಲ್ಮಜಲು, ವಿಖ್ಯಾತ್ ಬಳ್ಳಮಜಲು, ರಮೇಶ್ ನಿಧಿ ಮುಂಡ, ರಾಜೇಶ್ ಪ್ರಸಾದ್ ಕೌಡಿಚ್ಚಾರು, ಶ್ರೇಯಸ್ ಮುಂಡೂರು ಆಯ್ಕೆಯಾದರು. ಪೂವಪ್ಪ ನಾಯ್ಕ ಕುಂಞಕುಮೇರು ಮತ್ತು ಲೋಕಾನಂದ ನಾಯ್ಕ್ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಮರಾಟಿ ಸಮಾಜ ಸೇವಾ ಸಂಘ (ರಿ.)ದ ಅಧ್ಯಕ್ಷರಾದ ಮಂಜುನಾಥ ಎನ್.ಎಸ್ ಸಭಾಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಅಶೋಕ್ ಬಲ್ನಾಡು. ಕೋಶಾಧಿಕಾರಿ ಬಾಬು ನಾಯ್ಕ್ ಉಪಸ್ಥಿತರಿದ್ದರು.