ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ-ಫಿಲೋಮಿನಾ ಕಾಲೇಜಿಗೆ 6 ಚಿನ್ನ, 3 ಬೆಳ್ಳಿ, 1 ಕಂಚು

0

ಪುತ್ತೂರು:ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದ.ಕ ಜಿಲ್ಲಾ ಕ್ರೀಡಾ ಸಂಸ್ಥೆಗಳು ಹಾಗೂ ಮಂಗಳೂರು ನಗರಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಥ್ಲೆಟಿಕ್ಸ್, ವೈಟ್ ಲಿಪ್ಟಿಂಗ್, ಬಾಸ್ಕೆಟ್ ಬಾಲ್, ಕುಸ್ತಿ, ಹ್ಯಾಂಡ್ ಬಾಲ್, ಬಾಕ್ಸಿಂಗ್, ವುಷು, ಟೆಕ್ವಾಂಡೋ, ನೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ತ್ರೋಬಾಲ್ ಸ್ಪರ್ಧೆಗಳನ್ನೊಳಗೊಂಡ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ-2023-24 ಅ.2-4ರ ವರೆಗೆ ಮಂಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿದ್ದು, ಈ ಕ್ರೀಡಾಕೂಟದ ವೈಟ್ ಲಿಪ್ಟಿಂಗ್ ವಿಭಾಗದಲ್ಲಿ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು 6 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಗಳಿಸಿಕೊಂಡಿದ್ದಾರೆ.


55 ಕೆ.ಜಿ ವಿಭಾಗದಲ್ಲಿ ಸುಜನ್ ಕೆರವರಿಗೆ ಬೆಳ್ಳಿ ಪದಕ, 61 ಕೆ.ಜಿ ವಿಭಾಗದಲ್ಲಿ ಮುನಾಫ್ ರವರಿಗೆ ಚಿನ್ನದ ಪದಕ, 73 ಕೆ.ಜಿ ವಿಭಾಗದಲ್ಲಿ ಭುವನ್ ರಾಮ್ ರವರಿಗೆ ಚಿನ್ನದ ಪದಕ, 81 ಕೆ.ಜಿ ವಿಭಾಗದಲ್ಲಿ ಶಬರೀಶ ಬಿ ರೈರವರಿಗೆ ಚಿನ್ನದ ಪದಕ, ಯತೀಶ್ ರವರಿಗೆ ಕಂಚಿನ ಪದಕ, 89 ಕೆ.ಜಿ ವಿಭಾಗದಲ್ಲಿ ಅಭಿ ರಾಮಚಂದ್ರ ಅಡಿಗುಂಡಿರವರಿಗೆ ಚಿನ್ನದ ಪದಕ,109 ಕೆಜಿ ವಿಭಾಗದಲ್ಲಿ ಅನ್ಸನ್ ಮಸ್ಕರೇನ್ಹಸ್ ರವರಿಗೆ ಬೆಳ್ಳಿ ಪದಕ, 109+ಕೆ.ಜಿ ವಿಭಾಗದಲ್ಲಿ ರಂಜಿತ್ ಕುಮಾರ್ ಎಂ.ರವರು ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಮಹಿಳೆಯರ ವಿಭಾಗದ 45 ಕೆ.ಜಿ ವಿಭಾಗದಲ್ಲಿ ಸ್ಪಂದನ ಕೆರವರು ಚಿನ್ನದ ಪದಕ, 71 ಕೆ.ಜಿ ವಿಭಾಗದಲ್ಲಿ ಬ್ಯೂಲಾ ಪಿ ಟಿರವರು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರಿಗೆ ತರಬೇತುದಾರ ಪುಷ್ಪರಾಜ್ ರವರು ತರಬೇತಿಯನ್ನು ನೀಡಿರುತ್ತಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here