ಕಡಬ: ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಬಿ ಎಮ್‌ ಎಸ್ ನಿಂದ ಪ್ರತಿಭಟನೆ

0

ಕಡಬ: ಕಡಬ ತಹಶೀಲ್ದಾರರ ಕಚೇರಿಯ ಎದುರು ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಕಡಬ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸೌಲಭ್ಯಗಳನ್ನು ಕಡಿತ ಮಾಡುವ‌ ನಿರ್ಧಾರವನ್ನು ಕೈಬಿಡಬೇಕು‌ ಹಾಗೂ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಸಿಗುವ ಹಲವು ಸೌಲಭ್ಯಗಳನ್ನು ಕಡಿತ ಮಾಡುವ ಬಗ್ಗೆ ಯೋಜಿಸಿದೆ. ಇದನ್ನು ಖಂಡಿಸಿ ಭಾರತೀಯ ಮಜ್ದೂರ್ ಸಂಘ ದ ಕಟ್ಟಡ ಕಾರ್ಮಿಕ ಸಂಘಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ತಕ್ಷಣ ಸೌಲಭ್ಯ ಕಡಿತ ಮಾಡುವ ನಿರ್ಧಾರವನ್ನು ಸರ್ಕಾರ ಹಿಂಪಡೆಯುವಂತೆ ಅವರು ಒತ್ತಾಯಿಸಿದರು. ಮತ್ತು 2021 ಸಾಲಿನ ಬಾಕಿಯಾಗಿರುವ 1 ಲಕ್ಷ ಕಟ್ಟಡ ಕಾರ್ಮಿಕರ ಸ್ಕಾಲರ್ ಶಿಪ್ ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. 2022 23ನೇ ಸಾಲಿನ ಸ್ಕಾಲರ್ ಶಿಪ್ ಗಳ ಶೀಘ್ರ ಕಾರ್ಮಿಕರಿಗೆ ಪಾವತಿಸಬೇಕು ಮತ್ತು ಕಾರ್ಮಿಕರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸರಿಯಾದ ಮರುಪಾವತಿಗೂ ಅವರು ಒತ್ತಾಯಿಸಿದರು.‌

ಮಂಡಳಿಯಲ್ಲಿ ಅನಾವಶ್ಯಕ ಟೆಂಡರ್ ಕರೆದು ಮಂಡಳಿಯ ಹಣ ಪೋಲು ಮಾಡುವ ಯೋಜನೆ ಜಾರಿಗೆ ತರದೇ ಕಾರ್ಮಿಕರಿಗೆ ಅವಶ್ಯಕ ವಸತಿ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ತರಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಡಬ ತಾಲೂಕು ಬಿಎಂಎಸ್ ಗೌರವಾಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ ,ಜಿಲ್ಲಾ ಜತೆ ಕಾರ್ಯದರ್ಶಿ ಸಾಂತಪ್ಪ , ತಾಲೂಕು ಕಾರ್ಯದರ್ಶಿ ಸುಧೀರ್ ರಾವ್, ಉಪಾಧ್ಯಕ್ಷ ದೇಜಪ್ಪ ಸಂಪಡ್ಕ, ಜತೆ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಗುಂಡಿಜಾಲು, ಉಪಾಧ್ಯಕ್ಷ ಕೇಶವ ಕೊಣಾಲು, ಪ್ರಮುಖರಾದ ಪ್ರಮೋದ್ ನಂದುಗುರಿ, ಅಜಿತ್ ಅರ್ತಿಲ, ಮಾಧವ ಕೋಲ್ಪೆ, ಸತೀಶ್ ನಾಯ್ಕ, ಸುರೇಶ್ ದೇಂತಾರು, ಜನಾರ್ದನ ಗೌಡ ಕಯ್ಯಪೆ, ವಿದ್ಯಾಧರ ಕೇನ್ಯ ಮೊದಲಾದವರಿದ್ದರು.

ಕಡಬ ತಾಲೂಕು ಬಿಎಂಎಸ್ ಅಧ್ಯಕ್ಷರಾದ ಚಂದ್ರಶೇಖರ ಮರ್ಧಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಜನಾರ್ದನ ಗೌಡ ಅರಿಗ ವಂದಿಸಿದರು.

ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ತಾಲೂಕ್ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here