ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದಿನಚರಿ
ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಆಶ್ಲೇಷ ನಕ್ಷತ್ರದಂದು ದೇವರ ದರ್ಶನ ಆಗಬೇಕಿತ್ತು, ಪೂಜೆ ಸಲ್ಲಿಸಬೇಕಿತ್ತು. ಆದರೆ
ಹವಾಮಾನ ವೈಪರೀತ್ಯಗಳಿಂದ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಬರಲು ಸಮಸ್ಯೆಯಾದರೂ ಅವರು ಸಕಲೇಶಪುರದಿಂದ ಬೆಂಗಳೂರಿಗೆ ವಾಪಾಸ್ ಆಗಿ ಅಲ್ಲಿಂದ ವಿಮಾನ ಮೂಲಕ ಮಂಗಳೂರಿಗೆ ಬಂದು ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದರು.ಕಾರಣ ಅ.9 ಸೋಮವಾರ ಆಶ್ಲೇಷ ನಕ್ಷತ್ರ.
ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ನಕ್ಷತ್ರ ವಿಶೇಷವಾದ ದಿನವಾಗಿದೆ. ದೇವೇಗೌಡರು ಪ್ರತೀ ಬಾರಿ ವಿಶೇಷ ಪೂಜೆ, ಸೇವೆ ಸಲ್ಲಿಸಲು ಬಂದಿರುವುದು ಕೂಡಾ ಆಶ್ಲೇಷ ನಕ್ಷತ್ರದಂದೇ.ಈ ಬಾರಿ ಪತ್ನಿ ಚೆನ್ನಮ್ಮ ಸಹಿತ ಆಗಮಿಸಿದ ದೇವೇ ಗೌಡರು ಸಹಾಯಕರ ಮೂಲಕ ಕ್ಷೇತ್ರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಿದರು.
ದೇವೇ ಗೌಡರ ಜೀವನೋತ್ಸಾಹ ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದು.90 ವರ್ಷದ ದೇವೇ ಗೌಡರು ಈಗಲೂ ಧ್ಯಾನದಂತಹ ಕೆಲಸಕ್ಕೂ ಸಮಯ ಮೀಸಲಿಡುತ್ತಾರೆ. ಭಾನುವಾರ ರಾತ್ರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ ಅಲ್ಲಿಂದ 1.30 ಕ್ಕೆ ಕುಕ್ಕೆ ಗೆ ಬಂದರು.6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಪೂಜೆಗೆ ಹೊರಟು ಕಾರಿನಲ್ಲಿ ಕುಳಿತು ಚೆನ್ನಮ್ಮ ಅವರನ್ನು ಕಾಯುತ್ತಿದ್ದರು. ಈ 10 ನಿಮಿಷದ ಕಾಲವನ್ನು ವ್ಯರ್ಥ ಮಾಡದೆ ತನ್ನ ಬಳಿಯೇ ಇದ್ದ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ವಾಚಿಸಿದರು.
ಈ ವಿಚಾರವನ್ನು ಸುಳ್ಯದ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.