ಬಾಲವಿಕಾಸ ಆ. ಮಾ ಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭ

0

ವಿಟ್ಲ: ಮಾಣಿ‌‌‌ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಕ್ರೀಡಾಂಗಣದಲ್ಲಿ ಅ. 6 ಮತ್ತು7ರಂದು ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾ ಕೂಟದ ಸಮಾರೋಪ ಸಮಾರಂಭವು ಅ. 7 ರಂದು ನಡೆಯಿತು.
ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಜೆ ಶೆಟ್ಟಿಯವರು ಕಾರ್ತಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಭ್ಯಾಸವೆನ್ನುವುದು ಪುಸ್ತಕದಂತೆ ದಿನನಿತ್ಯ ತೆರೆಯಬೇಕು. ಪ್ರತಿನಿತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪ್ರಯತ್ನಪಟ್ಟರೆ ಕ್ರೀಡಾ ಸಾಮರ್ಥ್ಯ ಬೆಳೆದು ದಾಖಲೆಗಳು ನಿಮ್ಮದಾಗುತ್ತದೆ ಎಂದರು.

ಮಾಣಿ ವಲಯದ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್ ರವರು ಮಾತನಾಡಿ ಬಾಲವಿಕಾಸದ ಹೊಸ ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ನಡೆದ ಕ್ರೀಡಾಕೂಟವು ಅದ್ದೂರಿಯಾಗಿ,ವ್ಯವಸ್ಥಿತವಾಗಿ ನೆರವೇರಿದೆ ಎಂದು ಹೇಳಿದ ಅವರು ಸಂಸ್ಥೆಯನ್ನು ಅಭಿನಂದಿಸಿದರು.
ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು 14ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, 14ರ ವಯೋಮಾನದ 8ನೇ ತರಗತಿ ಬಾಲಕರ ವಿಭಾಗದಲ್ಲಿ ಶ್ರೀರಾಮ ಶಾಲೆ ಕಲ್ಲಡ್ಕ, ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ,17ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ದೇವಮಾತ ಆಂಗ್ಲ ಮಾಧ್ಯಮ ಶಾಲೆ, ಅಮ್ಟೂರು, ಬಾಲಕಿಯರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ, ಪೆರಾಜೆ ಮಾಣಿ ಪಡೆದುಕೊಂಡಿದೆ.

ವೇದಿಕೆಯಲ್ಲಿ ಕಲ್ಲಡ್ಕ ವಲಯದ ನೋಡಲ್ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ನಾಯ್ಕ್, ಬಾಲವಿಕಾಸದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಉಪಸ್ಥಿತರಿದ್ದರು. ಬಾಲವಿಕಾಸದ ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ಮತ್ತು ವಿಶಾಲಾಕ್ಷಿ ಹೆಚ್ ಆಳ್ವ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಸ್ವಾಗತಿಸಿ, ಆಡಳಿತಾಧಿಕಾರಿ ರವೀಂದ್ರ ದರ್ಬೆ ವಂದಿಸಿದರು. ಸಹಶಿಕ್ಷಕಿಯರಾದ ಸುಧಾ ಎನ್. ರಾವ್ ಮತ್ತು ಸುಪ್ರಿಯಾ ಡಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here