ಕೂರ್ನಡ್ಕದಲ್ಲಿ ಐಡಿಯಲ್ ಚಿಕನ್‌ನ ಪ್ರಾಂಚೈಸಿ ಶುಭಾರಂಭ-ಶುಭಹಾರೈಸಿದ ಗಣ್ಯರು

0

ಪುತ್ತೂರು: ತಾಜಾ ಮತ್ತು ರುಚಿಕರವಾದ ಕೋಳಿ ಉದ್ಯಮ ಸಂಸ್ಥೆ ಪ್ರತಿಷ್ಠಿತ ಐಡಿಯಲ್ ಚಿಕನ್‌ರವರ ಪ್ರಾಂಚೈಸಿ ಔಟ್‌ ಲೆಟ್ ಅ.12ರಂದು ಕೂರ್ನಡ್ಕ ಮರಿಯಮ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸಯ್ಯದ್ ಶರ್ಫುದ್ದೀನ್ ತಂಞಲ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಐಡಿಯಲ್ ಚಿಕನ್ ಆಡಳಿತ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಮಾತನಾಡಿ, ಉತ್ತಮ ದರ್ಜೆ, ಮೃದು ಹಾಗೂ ರೋಗ ರಹಿತವಾದ ಕೋಳಿ ಮಾಂಸ ವಿತರಣೆಯ ಮೂಲಕ ಮನೆ ಮಾತಾಗಿರುವ ಐಡಿಯಲ್ ಚಿಕನ್‌ನ 25ನೇ ಶಾಖೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿದೆ. ಕೋಳಿ ಸಾಕಾಣೆಕೆಯಲ್ಲಿ ಮುಂಚೂನಿಯಲ್ಲಿದ್ದು ಎಲ್ಲಾ ಡೀಲರ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸುಮಾರು 850ಕ್ಕೂ ಅಧಿಕ ಸಾಕಾಣಿಕೆದಾರರಿದ್ದಾರೆ. ಕೋಳಿಗಳನ್ನು ನಮ್ಮದೇ ಫಾರ್ಮ್ ನಲ್ಲಿ ಸಂಸ್ಕರಿಸಿ 27 ವಿವಿಧ ಭಾಗಗಳಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ದೊರೆಯಲಿದೆ. ಹಲಾಲ್ ಆಗಿ ಸಂಸ್ಕರಿಸಲಾಗುತ್ತಿದ್ದು, ಜೀವದ ಕೋಳಿ ಹಾಗೂ 27 ಭಾಗಗಳಲ್ಲಿ ಮಾಂಸಗಳು ದೊರೆಯಲಿದೆ. ಅಧಿಕ ಮಾಂಸ ಹಾಗೂ ಎಲುಬು ಕಡಿಮೆಯಾಗಿರುತ್ತದೆ. ಕೋಳಿ ಮಾಂಸ ಪಡೆದುಕೊಳ್ಳಲು ಗ್ರಾಹಕರು ಪ್ರಾಂಚೈಸಿಗೆ ಬರಬೇಕಾಗಿಲ್ಲ. ಮೊಬೈಲ್ ಆ್ಯಪ್ ಬಳಸಿ ಆರ್ಡರ್‌ ಮಾಡುವ ಮೂಲಕ ತಮಗೆ ಬೇಕಾದ ಮಾಂಸಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಆಹಾರ ಮತ್ತು ಸಂಸ್ಕರಣಾ ಇಲಾಖೆಯಿಂದ ಅನುಮತಿ ಪಡೆದು ಸಂಸ್ಥೆಯು ವ್ಯವಹರಿಸುತ್ತಿದೆ ಎಂದರು.

ಐಡಿಯಲ್ ಚಿಕನ್‌ನ 4 ಕಡೆಗಳಲ್ಲಿ ಪ್ರಾಂಚೈಸಿಯಿದೆ. ಉಳಿದ 21 ಕಡೆಗಳಲ್ಲಿ ಸಂಸ್ಥೆಯ ಮೂಲಕ ಶಾಖೆಯನ್ನು ಹೊಂದಿದೆ. ಇನ್ನು ಶೀಘ್ರದಲ್ಲಿ ಕಡಬದಲ್ಲಿ ನಮ್ಮ ಸಂಸ್ಥೆಯ ಶಾಖೆಯ ಪ್ರಾರಂಭಗೊಳ್ಳಲಿದೆ ಎಂದು ಐಡಿಯಲ್ ಚಿಕನ್ ಆಡಳಿತ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹೇಳಿದರು. ನಗರ ಸಭಾ ಸದಸ್ಯ ಬಾಲಚಂದ್ರ ಮರೀಲ್ ಮಾತನಾಡಿ, ಐಡಿಯಕ್ ಚಿಕನ್‌ನಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಾಂಸಗಳು ದೊರೆಯಲಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವಾದ ಆ್ಯಪ್ ಮೂಲಕ ಖಾದಿರಿಸಿ ಮನೆ ಬಾಗಿಲಿಗೆ ತರಿಸಿಕೊಳ್ಳಲು ಅವಕಾಶವಿದ್ದು ಪುತ್ತೂರಿನ ಜನತೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಮಾತನಾಡಿ, ಜನರ ಅಪೇಕ್ಷೆಗೆ ತಕ್ಕಂತೆ ಐಡಿಯಲ್ ಚಿಕಿನ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಕೋಳಿ ಮಾಂಸ ಪಡೆಯಬಹುದಾಗಿದ್ದು ಗ್ರಾಹಕರ ವಿಶ್ವಾಸ ಗಳಿಸಲಿ ಎಂದರು. ವಕ್ಫ್ ಬೋರ್ಡ್ನ ಮಾಜಿ ಸದಸ್ಯ ಮಹಮ್ಮದ್ ಕುಂಞ ವಿಟ್ಲ ಮಾತನಾಡಿ, ಕಠಿಣ ಪರಿಶ್ರಮದ ಮೂಲಕ ಯಶಸ್ವಿ ಉದ್ಯಮಿಯಾದ ಝುಬೈರ್ ಇಂದು ಪ್ರತಿಷ್ಠಿತ ಐಡಿಯಲ್ ಚಿಕನ್‌ ಪ್ರಾಂಚೈಸಿ ಪ್ರಾರಂಭಿಸಿದ್ದಾರೆ. ಇವರ ಮೂಲಕ ಇನ್ನಷ್ಟು ಪ್ರಾಂಚೈಸಿಗಳು ಪ್ರಾರಂಭವಾಗಲಿ ಎಂದರು. ಬಂಟ್ವಾಳ ಜಮೀಯತ್ತುಲ್ ಫಲಾಹ್‌ನ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ, ದ.ಕ., ಉಡುಪಿ ಜಿಲ್ಲೆಗಳಲ್ಲಿ ವ್ಯವಹರಿಸುತ್ತಿದ್ದ ಐಡಿಯಲ್ ಚಿಕನ್ ಇನ್ನು ಮುಂದೆ ಪುತ್ತೂರಿನ ಜನತೆಗೂ ಲಭ್ಯವಾಗಲಿದೆ. ಐವತ್ತನೇ ಪ್ರಾಂಚೈಸಿಯು ಝುಬೈರ್ ಮೂಲಕ ಪ್ರಾರಂಭವಾಗಲಿ ಎಂದು ಆಶಿಸಿದರು.

ಕೂರ್ನಡ್ಕ ಪೀರ್ ಮೊಹಲ್ಲಾ ಜಮಾಅತ್ ಕಮಿಟಿಯ ಅಧ್ಯಕ್ಷ ಕೆ.ಎಚ್ ಖಾಸಿಂ, ದರ್ಬೆ ಮುಹಮ್ಮದೀಯ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಕೂರ್ನಡ್ಕ ಹನಫಿ ಜುಮ್ಮಾ ಮಸೀದಿ ಅಧ್ಯಕ್ಷ ರಝಾಕ್ ಖಾನ್, ಮೊಟ್ಟೆತ್ತಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಹುಸೈನ್ ದಾರಿಮಿ ರೆಂಜಲಾಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಅಬ್ದುಲ್ ರಹಿಮಾನ್ ಅರಿಯಡ್ಕ, ನಿವೃತ್ತ ಪ್ರಾಂಶುಪಾಲ ಕ್ಸೇವಿಯರ್ ಡಿ’ಸೋಜ, ಐಡಿಯಲ್ ಚಿಕನ್‌ನ ಶರ್ಲಿ ಕುಟಿನ್ಹಾ, ಟೋಪ್ಕೋ ಜ್ಯುವೆಲ್ಲರಿಯ ಮಹಮ್ಮದ್ ಕುಂಞ, ಟಿಂಬರ್ ಮರ್ಚೆಂಟ್ ಮೋನು ಹಾಜಿ, ಇ ಫ್ರೆಂಡ್ಸ್ನ ಇಮ್ತಿಯಾಝ್, ಶಕೂರ್ ಹಾಜಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ, ಸಂಸ್ಥೆಗೆ ಶುಭಹಾರೈಸಿದರು. ಪ್ರಾಂಚೈಸಿ ಪಾಲುದಾರರಾದ ಝಬೈರ್ ಬೆಳಿಯೂರುಕಟ್ಟೆ ಹಾಗೂ ಪಿ.ಕೆ ಮಹಮ್ಮದ್ ಅತಿಥಿಗಳಿಗೆ ಹೂಗುಚ್ಚ ಹಾಗೂ ಸ್ಮರಣಿಕ ನೀಡಿ ಗೌರವಿಸಿದರು. ಅಬ್ದುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here