ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರ ಆರೋಗ್ಯ ಲೇಖನಗಳ ಸಂಕಲನ “ಆರೋಗ್ಯ ಪ್ರಸಾದಿನೀ” ಕೃತಿ ಬಿಡುಗಡೆಗೊಳಿಸಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ

0

ಪುತ್ತೂರು(ಉಜಿರೆ): ಪುತ್ತೂರು ತಾಲ್ಲೂಕಿನ ನರಿಮೊಗರು ಎಂಬಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ತಜ್ಞ ವೈದ್ಯರೂ ಅಗಿರುವ ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು “ಆರೋಗ್ಯ ಪ್ರಸಾದಿನೀ” ಎಂಬ ಆರೋಗ್ಯ ಕೈಪಿಡಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಡಾ.ಹೆಗ್ಡೆಯವರು ತಾವೇ ಅಧ್ಯಯನ ನಡೆಸಿ, ಸಂಶೋಧನೆ ಮಾಡಿ ತಯಾರಿಸಿದ ಆಯುರ್ವೇದ ಔಷಧಿಗಳ ಮೂಲಕ ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು ಅನೇಕರಿಗೆ ಆರೋಗ್ಯಭಾಗ್ಯ ರಕ್ಷಣೆಗೆ ಕಾಯಕಲ್ಪ ನೀಡಿದ್ದಾರೆ. ಆರೋಗ್ಯ ಪ್ರಸಾದಿನೀ ಕೃತಿ ಉಪಯುಕ್ತ ಮಾಹಿತಿ, ಮಾರ್ಗದರ್ಶನದೊಂದಿಗೆ ಆರೋಗ್ಯ ರಕ್ಷಣೆ ಬಗ್ಯೆ ಮಾಹಿತಿಯ ಕಣಜವಾಗಿ ಮೂಡಿ ಬಂದಿದೆ ಎಂದು  ಹೇಳಿದರು.

ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರ ವೈದ್ಯಕೀಯ ಸೇವೆ ಮತ್ತು ಜ್ಞಾನದಾಸೋಹ ಕಾಯಕವನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಶ್ರುತಿ ಎಂ.ಎಸ್., ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪ್ ಕೃಷ್ಣ ಬಂಗಾರಡ್ಕ, ಜೀವವಿಮಾ ಸಲಹೆಗಾರ ಎಂ.ಎಸ್. ಭಟ್ ಉಪಸ್ಥಿತರಿದ್ದರು.
ಡಾ. ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ದಂಪತಿಯ ಪುತ್ರಿಯರಾದ ಕು.ಸುದಿಕ್ಷಾ ಮತ್ತು ಕು.ಸುನಿಧಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here