ಪುತ್ತೂರು: ಪುತ್ತಿಲ ಪರಿವಾರ ವಿಟ್ಲ ವಲಯ ಹಾಗೂ ಶನೈಶ್ಚರ ಪೂಜಾ ಸಮಿತಿ ವತಿಯಿಂದ ಡಿ.9ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಶನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆಯು ನ.1ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ದೇಸವ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶ್ರೀಕೃಷ್ಣ ಕೇಪು, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಗೌರವಾಧ್ಯಕ್ಷರಾದ ಕೃಷ್ಣಯ್ಯ ಅರಮನೆ, ಸುಬ್ರಹ್ಮಣ್ಯ ಭಟ್ ಸೇರಾಜೆ, ನಗರ ಸಮಿತಿ ಅಧ್ಯಕ್ಷ ಮೋಹನ್ ಸೇರಾಜೆ, ಪ್ರಮುಖರಾದ ಉದ್ಯಮಿ ಪ್ರಭಾಕರ್ ಶೆಟ್ಟಿ ದಂಬೆಕಾನ, ಇಂಜಿನಿಯರ್ ಭಾಸ್ಕರ ರೈ, ಸುರೇಶ್ ಬನಾರಿ, ವೀರಾಂಜನೇಯ ವ್ಯಾಯಾಮ ಶಾಲೆಯ ದೇಜಪ್ಪ ಪೂಜಾರಿ ನಿಡ್ಯ, ಒಕ್ಕಲಿಗರ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ, ದೇವತಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಹಾಲಿ ಸದಸ್ಯೆ ಪದ್ಮಿನಿ ಪೂಜಾರಿ, ಅಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾನ ಈಶ್ವರ ಭಟ್, ಭಗವತಿ ಅಯ್ಯಪ್ಪ ಸಮಿತಿಯ ಮೋನಪ್ಪ ಗುರುಸ್ವಾಮಿ, ಅರ್ಚಕ ಕೀರ್ತನ್ ಕೆದಿಲಾಯ, ವಿಶ್ವಕರ್ಮ ಸಮಾಜದ ಪ್ರಭಾಕರ ಆಚಾರ್ಯ, ತಿರುಮಲೇಶ್ವರ ಭಟ್, ಸುರೇಶ್ ಭಟ್ ಮಡಿಯಾಲ, ಪ್ರಮೋದ್ ಉದ್ದಣ್ಣಾಯ ಉಪಸ್ಥಿತರಿದ್ದರು. ಪೂಜಾ ಸಮಿತಿಯ ಸಂಚಾಲಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು.