ಸರಕಾರದ ಪರೋಕ್ಷ ವೈಫಲ್ಯದಿಂದಾಗಿ ಅಹಿತಕರ ಕೃತ್ಯಗಳು‌ ನಡೆಯುತ್ತಿವೆ -ಮಾಜಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಅಕ್ಷಯ್ ಕಲ್ಲೇಗ ಅವರ ಪಾರ್ಥಿವ ಶರೀರದ ದರ್ಶನ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾಧ್ಯಮದವರೊಂದಿಗೆ ಮಾತನಾಡಿ ಹುಲಿ ಕುಣಿತಕ್ಕೆ ತನ್ನದೆ ಆದ ಛಾಪನ್ನು ಕೊಟ್ಟು ಎಲ್ಲಾ ಯುವಕರಿಗೆ ನಾಯಕತ್ವ ನೀಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ಕೊಟ್ಟ ಅಕ್ಷಯ ಕಲ್ಲೇಗ ಅವರ ಹತ್ಯೆಯಾಗಿದೆ. ಅವರ ಮರಣ ಈ ರೀತಿ ಆಗಲಿದೆ ಎಂದು ಯಾರೂ ಭಾವಿಸಿರಲಿಲ್ಲ. ಈ ಹತ್ಯೆಯ ಹಿಂದೆ ಯಾರ್ಯಾರು ಇದ್ದಾರೋ ಇದನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು ಮತ್ತು ಕಲಾವಿದ ಅಕ್ಷಯ ಕುಟುಂಬಕ್ಕೆ ರೂ.1 ಕೋಟಿ ಪರಿಹಾರ ಕೊಡಬೇಕು ಎಂದರು.ದ.ಕ ಜಿಲ್ಲೆಯಲ್ಲಿ ಲಾ ಆ್ಯಂಡ್ ಆರ್ಡರ್ ಕುಸಿದಿದೆ. ಎರಡು ತಿಂಗಳಲ್ಲಿ ಎರಡು ಮರ್ಡರ್ ಆಗಿದೆ. ಇದಕ್ಕೆ ಸರಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ, ರಾತ್ರಿ ಪೊಲೀಸ್ ಬೀಟ್ ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಸರಕಾರ ಪರೋಕ್ಷವಾಗಿ ವೈಪಲ್ಯ ಆಗಿದೆ ಎಂದರು.

LEAVE A REPLY

Please enter your comment!
Please enter your name here