ನ.14: ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆಯ ದಶಮಾನೋತ್ಸವ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ

0

ಪೆರಾಬೆ: ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ಇದರ 10ನೇ ವಾರ್ಷಿಕೋತ್ಸವ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ನ.14ರಂದು ಮಗ್ರಿಬ್ ನಮಾಜಿನ ಬಳಿಕ ಕುಂತೂರು ಎ & ಬಿ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.


ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೋಚಕಟ್ಟೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಕುಂತೂರು ಮಸೀದಿ ಮುದರ್ರಿಸ್‌ರವರ ನೇತೃತ್ವದಲ್ಲಿ ಶಂಸುಲ್ ಉಲಾಮಾ ಮೌಲಿದ್ ಪಾರಾಯಣ ನಡೆಯಲಿದೆ. ಮಗ್ರಿಬ್ ನಮಾಝ್‌ನ ಬಳಿಕ ಕುಂತೂರು ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ ಚಾಲ್ಕರೆಯವರ ಅಧ್ಯಕ್ಷತೆಯಲ್ಲಿ ಅನುಸ್ಮರಣ ಕಾರ್ಯಕ್ರಮ ನಡೆಯಲಿದೆ.

ಗೋಳಿತ್ತೊಟ್ಟು ಮಸೀದಿ ಖತೀಬರಾದ ಹನೀಫ್ ದಾರಿಮಿ ಕುಂತೂರು ಸ್ವಾಗತ ಭಾಷಣ ಮಾಡಲಿದ್ದಾರೆ. ಕುಂತೂರು ಮಸೀದಿ ಮುದರ್ರಿಸ್ ಅಲ್‌ಹಾಜ್ ಮೊಯಿದು ಫೈಝಿ ಎಡಪ್ಪಾಲ್ ಉದ್ಘಾಟಿಸಲಿದ್ದಾರೆ. ಹುಸೈನ್ ದಾರಿಮಿ ರೆಂಜಿಲಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಪ್ರಗಲ್ಬ ವಾಗ್ಮಿ, ಬಹುಭಾಷಾ ಪಂಡಿತರು, ಚಿಂತಕರೂ ಆದ ಬಹು| ಅಬ್ದುಸ್ಸಮದ್ ಪುಕಟೂರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ನೇತಾರರು, ಮಸೀದಿ, ಮದ್ರಸ ಪದಾಧಿಕಾರಿಗಳು, ಎಸ್‌ಕೆಎಸ್‌ಎಸ್‌ಎಸ್ ಹಲವು ಶಾಖೆಯ ಪದಾಧಿಕಾರಿಗಳು ಉಲಮಾ ಶಿರೋಮಣಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ದಶಮಾನೋತ್ಸವ ಸ್ವಾಗತ ಸಮಿತಿ ಕನ್ವಿನರ್ ಅಬ್ದುಲ್ಲಾ ಪಿ.ಎ.ಮರುವಂತಿಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here