ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವೈದಿಕ ಕಾರ್ಯಕ್ರಮ-ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳಿಗೆ ಪೂರ್ಣ ಕುಂಭ ಸ್ವಾಗತ

0

ಕೆಯ್ಯೂರು:   ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ22ರಂದು ವೈದಿಕ ಕಾರ್ಯಕಮ ನಡೆಯಿತು. ಕೆಯ್ಯೂರು ಮಹಾದ್ವಾರ ಬಳಿಯಿಂದ  ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ  ದೇವಲಾಯದ ತನಕ ಶ್ರೀ ರಾಮ ಚೆಂಡೆ ಪುತ್ತೂರು ಲಕ್ಷ್ಮೀಬೆಟ್ಟ ,ಇವರ ಚೆಂಡೆವಾದನ  ಮತ್ತು ಶ್ರೀ ರಾಮ ಮಕ್ಕಳ ಕುಣಿತಾ ಭಜನಾ ತಂಡ ಕೆಯ್ಯೂರು ಕುಣಿತ ಭಜನಾ ಮೂಲಕ, ಊರ ಗ್ರಾಮಸ್ಥರಿಂದ  ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳನ್ನು  ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಂಡರು.

ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಾರ್ಥವಾಗಿ ಜರುಗುವ ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಮದ್  ಭಾಗವತ ದಶಮ ಸ್ಕಂದ ಪಾರಾಯಣ ,ಸುದರ್ಶನ ಹೋಮ, ವನದುರ್ಗ ಹವನ, ಬಾಧಾಪರಿಹರ ಗಣಪತಿ ಹವನ ,ತಿಲ ಹವನ, ಸಾಯುಜ್ಯ ಪೂಜೆ ದ್ವಾದಶ ಮೂರ್ತಿ ಆರಾಧನೆ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರುಗಳಾದ  ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು,   ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಭಜಕರು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು, ದೇವಳದ ಅರ್ಚಕವೃಂದ, ಸಿಬ್ಬಂದಿವರ್ಗ, ಊರ ಹತ್ತು ಗ್ರಾಮಸ್ಥರು,ಭಕ್ತಾಧಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ,ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here