ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾ ಪಟುಗಳಿಗೆ ಮಜ್ಜಾರಡ್ಕ ಯುವಶಕ್ತಿ ಬಳಗದಿಂದ ಸನ್ಮಾನ

0

ಪುತ್ತೂರು: ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳಾದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುಕೇಶ್ ಹೆಗ್ಡೆ ಮತ್ತು ಕೈಕಾರದ ಪ್ರಶಾಂತ್ ರೈರವರನ್ನು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಸನ್ಮಾನಿಸಲಾಯಿತು. ಸಂಘಟನೆಯ ವತಿಯಿಂದ ನ.18 ರಂದು ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ಕ್ರೀಡಾಪಟುಗಳನ್ನು ಶಾಲು,ಪೇಟಾ,ಫಲಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಅಮೆಚೂರು ಕಬಡ್ಡಿ ಎಸೋಸಿಯೇಶನ್‌ನ ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಸುಧಾಕರ ರೈ ಪೆರಾಜೆ, ಗೌರವ ಸಲಹೆಗಾರರಾದ ಮನೋಜ್ ರೈ ಮಾಡಾವು, ತಿಲಕ್‌ರಾಜ್ ಉಡುಪಿ, ಸಂಘಟನೆಯ ಅಧ್ಯಕ್ಷ ರಘುನಾಥ ಗೋಳ್ತಿಲ, ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ಮಯೂರ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here