ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲೇ ಬಗರ್ ಹುಕುಂ ಸಮಿತಿಗಳ ರಚನೆ – ಸಚಿವ ಕೃಷ್ಣ ಬೈರೇ ಗೌಡ

0

ಬೆಂಗಳೂರು: ಭೂರಹಿತ ಸಾಗುವಳಿದಾರರ ಜಮೀನು ಸಕ್ರಮೀಕರಣಗೊಳಿಸುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ, ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲೇ ಬಗರ್ ಹುಕುಂ ಸಮಿತಿಗಳನ್ನು ರಚಿಸಿ, ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಈವರೆಗೆ 9.29 ಲಕ್ಷ ಅರ್ಜಿ ಸಲ್ಲಿಸಿದ್ದಾರೆ. ಸಕ್ರಮೀಕರಣಗೊಳಿಸಲು ಪರಿಶೀಲನೆ ನಡೆಸಿದಾಗ ಹಲವು ಅಕ್ರಮಗಳು ಬಯಲಾಗಿವೆ ಎಂದರು.

ಒಬ್ಬನೇ 25 ಅರ್ಜಿಗಳನ್ನು ಹಾಕಿರುವುದು, ಸಾಗುವಳಿ ಮಾಡದಿರುವವರು ಅರ್ಜಿ ಹಾಕಿರುವುದು ಸೇರಿದಂತೆ ವ್ಯವಸ್ಥೆಯಲ್ಲಿ ಹಲವು ನ್ಯೂನ್ಯತೆಗಳಿದ್ದಾವೆ. ಅವುಗಳನ್ನು ಸರಿ ಪಡಿಸಲು ಹೊಸದಾಗಿ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲಾಗುವುದು. ಈಗಾಗಲೇ 50 ಪ್ರಸ್ತಾವನೆಗಳು ಬಂದಿದ್ದು, ಅಷ್ಟೂ ಸಮಿತಿಗಳ್ನು ರಚಿಸಲಾಗುವುದು ಎಂದರು.

ಅರ್ಹರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಹಶೀಲ್ದಾರ್ ಅವರು ಜಮೀನು ಮಹಜರ್ ಮಾಡಿ ಸಾಗುವಳಿ ಖಾತ್ರಿಪಡಿಸಲಿದ್ದಾರೆ. ಇನ್ಮುಂದೆ ಬಗರ್ ಹುಕುಂ ಸಮಿತಿ ಸಭೆಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಹಾಜರಾತಿ ಬಯೋಮೆಟ್ರಿಕ್ ಮೂಲಕ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ಅಕ್ರಮಗಳನ್ನು ತಡೆಯಲು ಈ ಕ್ರಮ ಅನುಸರಿಸಿಸಲಾಗುತ್ತದೆ ಎಂದರು.

LEAVE A REPLY

Please enter your comment!
Please enter your name here