ಡಿ.29 ರಿಂದ 31ರ ತನಕ ಮುಕ್ವೆ ರಹ್ಮಾನಿಯಾ ಜುಮಾ ಮಸ್ಚಿದ್‌ನಲ್ಲಿ 3 ದಿವಸಗಳ ಧಾರ್ಮಿಕ ಮತ ಪ್ರವಚನ, ಬೃಹತ್ ನಹ್‌ತೇ ಶರೀಫ್ ಕಾರ್ಯಕ್ರಮ

0


ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ರಹ್ಮಾನಿಯಾ ಜುಮಾ ಮಸ್ಜಿದ್‌ನಲ್ಲಿ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ 3 ದಿನಗಳ ಧಾರ್ಮಿಕ ಮತ ಪ್ರವಚನ ಮತ್ತು ಬೃಹತ್ ನಹ್‌ತೇ ಶರೀಫ್ ಕಾರ್ಯಕ್ರಮ ಡಿ.29 ರಿಂದ 31ರ ತನಕ ನಡೆಯಲಿದೆ ಎಂದು ಮಸ್ಚಿದ್ ಅಧ್ಯಕ್ಷ ಇಬ್ರಾಹಿಂ ಮುಲಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಡಿ.29ರಂದು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಬಹು ಉಸ್ಮಾನ್ ಫೈಝಿ ತೋಡಾರು ದುವಾ ನೆರವೇರಿಸಲಿದ್ದಾರೆ. ಮುಕ್ವೆ ಹೆಚ್ ಐ ಎಂ ಸದರ್ ಮುಅಲ್ಲಿಂ ಉಮಾರ್ ಯಮಾನಿ ಅವರು ಸ್ವಾಗತಿಸಿ, ಕೇರಳ ಕುನ್ನುಂಗೈ ಸಯ್ಯದ್ ಎನ್.ಪಿ.ಎಂ ಶರಫುದ್ದೀನ್ ತಂಙಳ್ ಅವರು ಉದ್ಘಾಟಿಸಲಿದ್ದಾರೆ. ಮುಕ್ವೆ ರಹ್ಮಾನಿಯಾ ಜುಮಾ ಮಸ್ಚಿದ್‌ನ ಖತೀಬ ಬಹು| ಅನ್ವರ್ ಅಲಿ ದಾರಿಮಿ ಅಜ್ಜಾವರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬಳಿಕ ಕವಾಳಿ ಗಾಯಕ ಮುಹಮ್ಮದ್ ನಬೀಲ್ ರಝ ಬರ್ಕಾತಿ ಬೆಂಗಳೂರು ಇವರ ನೇತೃತ್ವದಲ್ಲಿ ಬೃಹತ್ ನಹ್‌ತೇ ಶರೀಫ್ ಕಾರ್ಯಕ್ರಮ ನಡೆಯಲಿದೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಘನ ಉಪಸ್ಥಿತಿಯಲ್ಲಿ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಡಿ.೩೦ ರಂದು ರಾತ್ರಿ ಕುಂಜತ್ರಬೈಲು ಮರಕಡ ಜುಮಾ ಮಸ್ಜಿದ್‌ನ ಖತೀಬರಾಗಿರುವ ಸಿದ್ದೀಕ್ ಸ್ವಾಗತಿಸಿ, ಬಹು| ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ರಾಜೀವ ಗಾಂಧಿ ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕಾರ್ ಅಲಿ ಅವರ ಘನ ಉಪಸ್ಥಿತಿಯಲ್ಲಿ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿ.31ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಕ್ವೆ ಮಸೀದಿಯ ಖತೀಬರಾಗಿರುವ ಬಹು| ಅನ್ವರ್ ಆಲಿ ದಾರಿಮಿ ಅಜ್ಜಾವರ ದುವಾ ಆಶೀರ್ವಚನ ನೀಡಲಿದ್ದಾರೆ. ಕಲ್ಲುಗುಂಡಿಯ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾಗಿರುವ ಹೆಚ್.ಎಮ್.ಅಹ್ಮದ್ ನಈಂ ಫೈಝಿ ಮುಕ್ವೆ ಅವರು ಸ್ವಾಗತಿಸಲಿದ್ದಾರೆ. ಹುಸೈನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕೇರಳದ ತಿರುವನಂತಪುರದ ಎ.ಎಂ.ನೌಶಾದ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮೂರು ದಿನದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿ ಉಪಾಧ್ಯಕ್ಷ ರಫೀಕ್ ಮಣಿಯ, ಮುಕ್ವೆ ಮಸೀದಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಹಾಜಿ ದರ್ಖಾಸ್, ಸ್ವಾಗತ ಸಮಿತಿ ಪ್ರಚಾರ ಸಮಿತಿ ಉಸ್ತುವಾರಿ ಪಿ ಎಂ ಅಶ್ರಫ್ ಮುಕ್ವೆ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಯಾಬುದ್ದೀನ್ ಎಮ್ ಎ, ಸ್ವಾಗತ ಸಮಿತಿ ಸದಸ್ಯ ಸಿದ್ದೀಕ್ ಚಿಕ್ಕಾಲ ಉಪಸ್ಥಿತರಿದ್ದರು.


ಸಾವಿರ ಮನೆಗಳಿದ್ದ ಜಮಾಅತ್ ಆಗಿತ್ತು
ಮುಕ್ವೆ ರಹ್ಮಾನಿಯಾ ಜುಮಾ ಮಸ್ಚಿದ್ ಬಹಳ ಹಿರಿಯ ಮಸೀದಿಯಾಗಿದ್ದು, ಹಿಂದೆ ಸಾವಿರ ಮನೆಗಳಿದ್ದ ಜಮಾಅತ್ ಆಗಿತ್ತು. ಬಳಿಕ 5 ಮಸೀದಿಗಳಾಗಿವೆ. ಹಾಗಾಗಿ 4 ಜಮಾಅತ್ ಇಲ್ಲಿಂದ ಹೋಗಿತ್ತು. ಪ್ರಸ್ತುತ 450 ಮನೆಗಳ ಜಮಾಅತ್ ಆಗಿದೆ ಎಂದು ಮಸೀದಿ ಪದಾಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here