ನಾಳೆ(ಫೆ.13): ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದಲ್ಲಿ 36ನೇ ವಾರ್ಷಿಕೋತ್ಸವ ರಥೋತ್ಸವ

0

ಪುತ್ತೂರು: ಶ್ರೀ ಗುರು ರಾಘವೇಂದ್ರ ಮಠ ಕಲ್ಲಮ ಇಲ್ಲಿ 36ನೇ ವಾರ್ಷಿಕೋತ್ಸವ ಮತ್ತು ರಥೋತ್ಸವ ಸಮಾರಂಭ ಫೆ.13ರಂದು ನಡೆಯಲಿದೆ.

ಶ್ರೀರಾಮ ಬಳಗ ಹಾಗೂ ಶ್ರೀ ರಾಘವೇಂದ್ರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಮಹಾಪೂಜೆ ಇತ್ಯಾದಿ ಸೇವೆಗಳನ್ನು ಏರ್ಪಡಿಸಿದ್ದು, ರಾತ್ರಿ ಗಂಟೆ 8ರಿಂದ ರಂಗಪೂಜೆ, ಉತ್ಸವ ರಥೋತ್ಸವ, ವಸಂತಕಟ್ಟೆ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ ಗಂಟೆ 6ರಿಂದ ಸಂಜೆ ಗಂಟೆ 6ರ ವರೆಗೆ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ಸಂಜೆ ಗಂಟೆ 6ರಿಂದ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ನೇತೃತ್ವದಲ್ಲಿ ಶ್ರೀ ಕೃಷ್ಣ ಕಲಾಕೇಂದ್ರ ವೀರಮಂಗಲ ಮತ್ತು ಭಕ್ತಕೋಡಿ ವಿದ್ಯಾರ್ಥಿಗಳಿಂದ ತುಳು ನೃತ್ಯ ರೂಪಕ `ಕಾರ್ಣಿಕದ ಕಲ್ಲುರ್ಟಿ’ ನಡೆಯಲಿದೆ ಎಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here