ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ರಥಸಪ್ತಮಿ ,ಬಹುಮಾನ ವಿತರಣಾ ಕಾರ್ಯಕ್ರಮ

0

ಉಪ್ಪಿನಂಗಡಿ: ಶ್ರೀರಾಮ ಶಾಲೆಯಲ್ಲಿ ರಥಸಪ್ತಮಿ ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಶ್ರೀರಾಮ ಶಾಲೆ ವೇದಶಂಕರನಗರ, ಉಪ್ಪಿನಂಗಡಿಯಲ್ಲಿ ಫೆ.16ರಂದು ನಡೆಯಿತು .

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ,ಗುರು ವೃಂದದವರು ಸಾಮೂಹಿಕವಾಗಿ ಮಂತ್ರ ಸಹಿತ ಸೂರ್ಯನಮಸ್ಕಾರ ಸೇರಿದಂತೆ ಯೋಗ ವ್ಯಾಯಾಮಗಳನ್ನು ಮಾಡಿ ರಥಸಪ್ತಮಿಯನ್ನು ವಿಶೇಷವಾಗಿ ಆಚರಿಸಲಾಯಿತು .

ಮುಖ್ಯ ಅತಿಥಿ ಆಡಳಿತ ಮಂಡಳಿಯ ಸದಸ್ಯ ಜಯಂತ್ ಪೊರೋಳಿ ಸೂರ್ಯನಮಸ್ಕಾರದ ಪ್ರತಿ ಹಂತವನ್ನು ಅನುಭವಿಸಿಕೊಂಡು ಮಾಡಬೇಕು .ಉಸಿರಾಟದ ಕಡೆಗೆ ಗಮನ ಸರಿಯಾಗಿ ನೀಡಿದರೆ ಮಾತ್ರ ಉತ್ತಮ ಪ್ರಯೋಜನವಾಗುವುದೆಂದು ತಿಳಿಸಿದರು . ಶಾಲಾ ಸಂಚಾಲಕ ಯು.ಜಿ ರಾಧ ಮಾತನಾಡಿ ಸೂರ್ಯನ ಬೆಳಕನ್ನು ಅನುಭವಿಸುವ ಜನರು ಕಡಿಮೆಯಾದ ಕಾರಣ ಇಂದು ಡಿ ಜೀವ ಸತ್ವದ ಔಷಧಿಗಳು ಮಾರುಕಟ್ಟೆಗೆ ಬಂದಿದೆ ಎಂದು ಇಂತಹ ಕಾರ್ಯಕ್ರಮಗಳಿಂದ ಮುಂಬರುವ ಅಪಾಯಗಳನ್ನು ತಡೆಗಟ್ಟಬಹುದು ಎಂದರು.


ಶ್ರೀರಾಮ ಶಾಲೆ ಆಯೋಜಿಸಿದ ಸ್ವಾಮಿ ವಿವೇಕಾನಂದರ 162 ನೇ ಜನ್ಮದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದಲ್ಲಿ ನಡೆದ “ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಶಿಕ್ಷಕನಾಗಿ ನನ್ನ ಚಿಂತನೆ” , ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಮಾಡಿದ್ದು, ಪ್ರಥಮ ಸ್ಥಾನ ಪಡೆದ ಡಾ.ಮೈತ್ರಿ ಭಟ್, ದ್ವಿತೀಯ ಸ್ಥಾನ ಗಳಿಸಿದ ಅನಂತ ಗಣಪತಿ ಎಸ್, ಮತ್ತು ತೃತೀಯ ಸ್ಥಾನ ಗಳಿಸಿದ ಮಲ್ಲಿಕಾ ಐ ರನ್ನು ಗೌರವಿಸಲಾಯಿತು.


ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ – ಮಕ್ಕಳ ಮೇಲೆ ಪರಿಣಾಮ – ಪರಿಹಾರ ಎಂಬ ವಿಷಯದಲ್ಲಿ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸುನೀತಾ ಶ್ರೀರಾಮ್ ಕೊಯಿಲ, ದ್ವಿತೀಯ ಸ್ಥಾನ ಪಡೆದ ಶ್ರೀದೇವಿ ಬಿ, ನೈತ್ತಡ್ಕ, ತೃತೀಯ ಸ್ಥಾನ ಪಡೆದ ಅಶ್ವಿನಿ ವಿ, ಕಾಡಕಂಡ ಇಳಂತಿಲರನ್ನು ಗೌರವಿಸಲಾಯಿತು.


ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್.ಪಿ, ಪ್ರೌಢ ವಿಭಾಗದ ಮುಖ್ಯ ಗುರು ರಘುರಾಮ್ ಭಟ್ ಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲ ಉಪಸ್ಥಿತರಿದ್ದರು. ಸುಜಾತ ಸ್ವಾಗತಿಸಿ, ಕೃಪಾ ಕಾರ್ಯಕ್ರಮ ನಿರೂಪಿಸಿ, ಪೂಜಾ ವಂದಿಸಿದರು.

LEAVE A REPLY

Please enter your comment!
Please enter your name here