ಪುತ್ತೂರು: ಕರ್ನಾಟಕದ ಕಾಂಗ್ರೆಸ್ ಸರಕಾರ ಮಂಡಿಸಿರುವ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ)ವಿಧೇಯಕ-2024ರಲ್ಲಿ, ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದೂಯೇತರರನ್ನೂ ಸದಸ್ಯರಾಗಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದು ಖಂಡನೀಯವಾಗಿದ್ದು ಹಿಂದೂ ಭಕ್ತರು ವ್ಯವಸ್ಥಾಪನಾ ಸಮಿತಿಗಳಿಗೆ ಅರ್ಜಿಯನ್ನೇ ಹಾಕದೆ ಇದನ್ನು ಪ್ರತಿಭಟಿಸಬೇಕು ಎಂದು ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಹೇಳಿದ್ದಾರೆ.
ದೇವಾಲಯದ ವಾರ್ಷಿಕ ಆದಾಯ ಇಪ್ಪತ್ತೈದು ಲಕ್ಷ ಮೀರಿದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಮತ್ತು ವಾರ್ಷಿಕ ಆದಾಯ 25 ಲಕ್ಷ ರೂ.ಗಳನ್ನು ಮೀರದಿದ್ದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್, ಭಕ್ತರ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಅನುಯಾಯಿಗಳ ಹಾಗೂ ಧರ್ಮಾದಾಯ ಸಂಸ್ಥೆಗಳ ಫಲಾನುಭವಿಗಳ ಪೈಕಿ 9 ಜನ ಸದಸ್ಯರನ್ನು ಮೀರದ ವ್ಯವಸ್ಥಾಪನಾ ಸಮಿತಿ ರಚಿಸತಕ್ಕದ್ದು ಮತ್ತು ಸಮಿತಿಗೆ ದೇವಾಲಯದ ಸಂಬಂಧದಲ್ಲಿ ಪ್ರಧಾನ ಅರ್ಚಕ ಅಥವಾ ಅರ್ಚಕ, ಅನುಸೂಚಿತ ಜಾತಿ ಅಥವಾ ಬುಡಕಟ್ಟಿಗೆ ಸೇರಿದವರ ಪೈಕಿಯಿಂದ ಕನಿಷ್ಟ ಒಬ್ಬರು, ಇಬ್ಬರು ಮಹಿಳೆಯರು, ಸಂಸ್ಥೆಯು ಇರುವ ಸ್ಥಳದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಪೈಕಿ ಕನಿಷ್ಟ ಒಬ್ಬರು ಸದಸ್ಯರುಗಳನ್ನು ಹೊಂದಿರತಕ್ಕದ್ದು. ಪರಂತು,ಸಂಯೋಜಿತ ಸಂಸ್ಥೆಯ ಸಂದರ್ಭದಲ್ಲಿ ಹಿಂದೂ ಮತ್ತು ಇತರ ಧರ್ಮಗಳೆರಡರಿಂದಲೂ ಸದಸ್ಯರನ್ನು ನೇಮಕ ಮಾಡಿಕೊಳ್ಳಬಹುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.ಹಿಂದೂ ಭಕ್ತಾದಿಗಳು ಯಾವುದೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅರ್ಜಿಯನ್ನೇ ಹಾಕದೆ ಇದನ್ನು ವಿರೋಽಸಬೇಕಾದ ಅನಿವಾರ್ಯತೆ ಇದೆ ಎಂದು ರಾಜೇಶ್ ಬನ್ನೂರು ಹೇಳಿದ್ದಾರೆ.