ಪ್ರಗತಿ ಪಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸಾಧನೆ-ಎಲ್ಲಾ ವಿಭಾಗಗಳಲ್ಲೂ ಕಾಲೇಜಿಗೆ 100% ಫಲಿತಾಂಶ

0

ಪುತ್ತೂರು : ಕರ್ನಾಟಕ ಪಾರಾ ಮೆಡಿಕಲ್ ಬೋರ್ಡ್ ನಡೆಸಿರುವ ಪರೀಕ್ಷೆಯಲ್ಲಿ ಇಲ್ಲಿನ ಬೊಳುವಾರು ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ಇದರ ವಿದ್ಯಾಸಂಸ್ಥೆ , ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಗೊಂಡು , ನೂರು ಶೇಕಡಾ ಫಲಿತಾಂಶವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ , ಭೋದಕ ವೃಂದ ಹಾಗೂ ಸಿಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.


ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್ ಒಪ್ತಲ್ಮಿಕ್ ಟೆಕ್ನಾಲಜಿ ಕೋರ್ಸ್ ಗಳಿಗೆ , ಪಾರಾ ಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ ಅಂತಿಮ ಘಟ್ಟದ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಶೇಕಡಾ ನೂರು ಫಲಿತಾಂಶ ಬಂದಿದೆ.
ಡಿ.ಎಂ.ಎಲ್. ಟಿ. ವಿಭಾಗದ ವಿದ್ಯಾರ್ಥಿನಿ ಮೇಘ. ಕೆ ಶೇ. 82.30 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು , ಮೇಘಶ್ರೀ ಶೇ.77.10 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಡಿ.ಒ.ಟಿ ಮತ್ತು ಎ.ಟಿ.ವಿಭಾಗದಲ್ಲಿ ಸಂಜನಾ. ಎಂ ಶೇ. 76.3 ಅಂಕಗಳೊಂದಿಗೆ ಪ್ರಥಮ ಹಾಗೂ ಚೈತ್ರ. ಬಿ ಶೇ.67.30 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

DOT ಡಿ.ಒ.ಟಿ ವಿಭಾಗದ ವಿದ್ಯಾರ್ಥಿನಿ ಕು.ಪವಿತ್ರ. ಕೆ ಶೇ.80 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಮತ್ತು ಪೂಜಾ ರೈ. ಎಸ್ ಶೇ.61.80 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶ್ರಮಿಸುತ್ತಿರುವ ಉಪನ್ಯಾಸಕರಿಗೆ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ , ಟ್ರಸ್ಟಿಗಳಾದ ಡಾ. ಸುಧಾ ಎಸ್ ರಾವ್, ಡಾ. ಸ್ಮಿತಾ ಎಸ್ ರಾವ್, ಡಾ. ಅಭೀಶ್ ಹೆಗ್ಡೆ ಹಾಗೂ ಸಂಸ್ಥೆಯ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ 10 ವರ್ಷಗಳಿಂದ ಸತತವಾಗಿ ಉತ್ತಮ ಫಲಿತಾಂಶ ಪಡೆಯುತ್ತಿದ್ದು , ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ದೇಶ , ವಿದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಮೂಲಕ ರಾಜೀವ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ನಿಂದ ಅಂಗೀಕೃತಗೊಂಡ ಪುತ್ತೂರು ತಾಲೂಕಿನ ಏಕೈಕ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ 2022 ನೆಯ ಸಾಲಿನಿಂದ ಕಾರ್ಯ ನಿರ್ವಹಿಸುತ್ತಿದ್ದು , ಬಿ ಎಸ್ಸಿ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ,
ಬಿ ಎಸ್ಸಿ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ , ಬಿಎಸ್ಸಿ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಎಮರ್ಜೆನ್ಸಿ ಮತ್ತು ಟ್ರಾಮಾ ಕೇರ್ ಟೆಕ್ನಾಲಜಿ ಕೋರ್ಸ್ ಗಳೆಲ್ಲಾ ಲಭ್ಯವಿದೆ.

LEAVE A REPLY

Please enter your comment!
Please enter your name here