ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ಮಸ್ಕರೇನ್ಹಸ್ ನಿಧನ

0

ಪುತ್ತೂರು: ಸಾಮೆತ್ತಡ್ಕ ದಿ.ಜೋಸೆಫ್ ಝೇವಿಯರ್ ಮಸ್ಕರೇನ್ಹಸ್ ಹಾಗೂ ಹಿಲ್ಡಾ ರೋಚ್ ರವರ ಪುತ್ರ, ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನ್ಹಸ್(54ವ.) ರವರು ಅಸೌಖ್ಯದಿಂದ ನಿಧನ ಹೊಂದಿದ್ದಾರೆ.

ಮೃತರು ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಪುತ್ತೂರಿನ ಸಾಮೆತ್ತಡ್ಕದಲ್ಲಿ ನೆಲೆಸಿದ್ದರು. ಅನಿಲ್ ವಿಲ್ಸನ್ ಮಸ್ಕರೇನ್ಹಸ್ ರವರು ಖ್ಯಾತ ವಾಲಿಬಾಲ್ ಆಟಗಾರರಾದ ದಿ.ಸುನಿಲ್ ಮಸ್ಕರೇನ್ಹಸ್ ರವರ ಸಹೋದರರಾಗಿರುತ್ತಾರೆ. ಮೃತರು ತಾಯಿ ಹಿಲ್ಡಾ ರೋಚ್, ಪತ್ನಿ ಮಾರಿ ಭಕಿಲ್ಲ, ಪುತ್ರಿ ಮಣಿಲ, ಸಹೋದರಿ ಅನಿತಾ ಮಸ್ಕರೇನ್ಹಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here