ಬೆಂಗಳೂರು:ಬಿಜೆಪಿ ಯುವಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ 11 ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿದೆ.
ತಮ್ಮ ಮೇಲೆ ದಾಳಿ ನಡೆಯುವ ಭೀತಿಯಿರುವುದಾಗಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ಆರೋಪಿಗಳು ತಮ್ಮನ್ನು ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು ಕೋರಿದ್ದರು.ಕುಟುಂಬದ ಸದಸ್ಯರು,ವಕೀಲರೊಂದಿಗೆ ಭೇಟಿಗೆ ಸಮಸ್ಯೆಯ ಕಾರಣ ನೀಡಿ ರಿಟ್ ಸಲ್ಲಿಸಲಾಗಿತ್ತು.ಮೊಹಮ್ಮದ್ ಜಾಬೀರ್ ಅರಿಯಡ್ಕ ತಪ್ಪೊಪ್ಪಿಗೆ ಸಾಕ್ಷಿಯಾಗಲು ಸಿದ್ಧನಿದ್ದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ 15 ಆರೋಪಿಗಳನ್ನು ವಿವಿಧ ಜೈಲುಗಳಿಗೆ ವರ್ಗಾಯಿಸಲು ಎನ್‌ಐಎ ಪತ್ರ ಬರೆದಿತ್ತು.ಆರೋಪಿಗಳನ್ನು ಬೆಂಗಳೂರು ಜೈಲಿಗೆ ವರ್ಗಾಯಿಸಲು ಹೈಕೋರ್ಟ್ ನಿರಾಕರಿಸಿದೆ.ಜೈಲುಗಳಲ್ಲಿ ಖೈದಿಗಳಿಗೆ ವಿಡಿಯೋ ಕಾನರೆನ್ಸ್ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.ಕುಟುಂಬದ ಸದಸ್ಯರು, ವಕೀಲರೊಂದಿಗೆ ಕಾನೂನಿಗೆ ಅನುಗುಣವಾಗಿ ಸಂವಹನಕ್ಕೆ ಅವಕಾಶ ಮತ್ತು ಸಂಭಾಷಣೆ ವೇಳೆ ಹೆಡ್ ಫೋನ್ ಒದಗಿಸಲು ನ್ಯಾ|ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.