ಶಾಂತಿಗೋಡು: ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ, ದರ್ಶನ ಬಲಿ, ದೈವಗಳ ನೇಮೋತ್ಸವ

0

ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ವರ್ಷಾವಧಿ ಜಾತ್ರೋತ್ಸವವು ಎ.2 ಮತ್ತು 3ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಎ.2ರಂದು ಬೆಳಿಗ್ಗೆ ಶ್ರೀವಿಷ್ಣುಮೂರ್ತಿ ಭಜನಾ ಮಂದಿರದ ಬಳಿಯಿಂದ ಊರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಎ.3ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು, ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ, ಸುಡುಮದ್ದು ಪ್ರದರ್ಶನ, ರಾತ್ರಿ ಕ್ಷೇತ್ರದ ದೈವಗಳಾದ ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.

ಎ.2ರಂದು ವೀರಮಂಗಲ ಪಿ.ಎಂ.ಶ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕಲಾವಿದರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ನಡೆಯಿತು. ಎ.3ರಂದು ಬೆಳಿಗ್ಗೆ ಮತ್ತು ರಾತ್ರಿ ಕೂಡುರಸ್ತೆ ಶ್ರೀದುರ್ಗಾ ಮಹಿಳಾ ಭಜನಾ ಮಂಡಳಿ ಮತ್ತು ಹಾಗೂ ಶ್ರೀಮಹಾವಿಷ್ಣು ಭಜನಾ ಮಂಡಳಿ ಶಾಂತಿಗೋಡು ತಂಡದಿಂದ ಭಜನೆ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಆಡಳಿತಾಧಿಕಾರಿ ಪಿಡಿಓ ರವಿಚಂದ್ರ ಯು, ಸಮಿತಿ ಸದಸ್ಯರಾಗಿರುವ ಅರ್ಚಕ ರಾಮಕೃಷ್ಣ ಬಳ್ಳಕ್ಕುರಾಯ, ಎಸ್.ಪಿ. ನಾರಾಯಣ ಗೌಡ ಪಾದೆ, ಎಸ್.ಕೃಷ್ಣ ವಿಷ್ಣುನಗರ, ವಿಶ್ವನಾಥ ಬಲ್ಯಾಯ ಮುಂಡೋಡಿ, ದೇವರಾಜ ಗೌಡ ಕಲ್ಕಾರು, ಕೂಸಪ್ಪ ನಾಯ್ಕ ಬಿರ್ಮನಕಜೆ, ನಾಗಮ್ಮ ಬಾಲಕೃಷ್ಣ ಗೌಡ ತೋಟ, ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಉತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ರಾಮಕೃಷ್ಣ ಭಟ್ ಗುಂಡಿಬೈಲು, ಸುಬ್ರಹ್ಮಣ್ಯ ಹೆಬ್ಬಾರ್ ಸೇರಾಜೆ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ವಿನೋದ್ ಸುವರ್ಣ ಕರ್ಪಿನಮೂಲೆ, ನಾರಾಯಣ ಪೂಜಾರಿ ಬೇರಿಕೆ, ವರುಣ್ ಓಲಾಡಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ತೋಟ, ಸಂಚಾಲಕ ನಾರಾಯಣ ಗೌಡ ಕೈಂದಾಡಿ, ಜತ್ತಪ್ಪ ಗೌಡ ಕೈಂದಾಡಿ, ನಾಗೇಶ್ ಸಾರಕರೆ, ನಾರಾಯಣ ಗೌಡ ಎಸ್.ಪಿ ಪಾದೆ, ಪರೀಕ್ಷಿತ್ ತೋಳ್ಪಾಡಿ ಕೆಂಬ್ಲಾಜೆ, ಸುಧೀರ್ ತೋಳ್ಪಾಡಿ ಶಾಂತಿಗೋಡು, ದೇವಪ್ಪ ಪಜಿರೋಡಿ, ನಾರ್ಣಪ್ಪ ಸಾಲ್ಯಾನ್ ಮರಕ್ಕೂರು, ಶ್ಯಾಮ್ ಭಟ್ ಕೈಂದಾಡಿ, ಹೊನ್ನಪ್ಪ ಪೂಜಾರಿ ಕೈಂದಾಡಿ, ಸೀತಾರಾಮ ಗೌಡ ಓಲಾಡಿ, ಪ್ರದೀಪ್ ತೋಳ್ಪಾಡಿ, ದೇವರಾಜ ಗೌಡ ಬಾಕಿಮಾರು, ಮಾಲಪ್ಪ ಪಜಿರೋಡಿ, ಬಾಲಕೃಷ್ಣ ತೋಳ್ಪಾಡಿ ಕಲ್ಕಾರು, ಎಸ್.ಎಂ ಗೌಡ ಶ್ರೀದೇವಿ ನಿಲಯ, ವಿವಿಧ ಸಮಿತಿ ಸದಸ್ಯರು ಹಾಗೂ ಊರ, ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಂತಿಗೋಡು, ದುರ್ಗಾ ಮಹಿಳಾ ಭಜನಾ ಮಂಡಳಿ ಕೂಡುರಸ್ತೆ ಶಾಂತಿಗೋಡು, ಮಹಾವಿಷ್ಣು ಭಜನಾ ಮಂಡಳಿ ಶಾಂತಿಗೋಡು, ಗ್ರಾಮ ವಿಕಾಸ ಯೋಜನೆ ಶಾಂತಿಗೋಡು, ವಿಕ್ರಮ ಯುವಕ ಮಂಡಲ ಶಾಂತಿಗೋಡು ಸಹಕರಿಸಿದರು. ದೇವಸ್ಥಾನದ ಕಾರ್ಯಕ್ರಮಕ್ಕೆ ಓಂಕಾರ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಶಾಂತಿಗೋಡು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here