ಪುತ್ತೂರು ವಕೀಲರ ಸಂಘದ ಚುನಾವಣೆ- ಬಿರುಸಿನಿಂದ ನಡೆಯುತ್ತಿದೆ ಮತದಾನ-ಮಧ್ಯಾಹ್ನದ ವೇಳೆಗೆ ಶೇ.70 ಮತದಾನ

0

ಪುತ್ತೂರು:ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಮುಂದಿನ 2 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ನಾಲ್ಕು ಸ್ಥಾನಗಳ ಪದಾಧಿಕಾರಿಗಳ ಆಯ್ಕೆಗೆ ಏ.6ರಂದು ಮತದಾನವು ನಡೆಯುತ್ತಿದೆ.


ಬೆಳಿಗ್ಗೆ10 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ಒಟ್ಟು 389 ಮತದಾರರಿದ್ದು ಮಧ್ಯಾಹ್ನದ ವೇಳೆಗೆ ಶೇ.70ರಷ್ಟು ಮತದಾನವಾಗಿದೆ. ಮತದಾನವು ಸಂಜೆ 4 ಗಂಟೆಯ ತನಕ ನಡೆಯಲಿದೆ. ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ವಕೀಲರ ಸಂಘದ ಪರಾಶರ ಸಭಾಂಗಣದಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಕಜೆ, ಜಿ.ಜಗನ್ನಾಥ ರೈ, ಸಂತೋಷ್ ಕುಮಾರ್ ಎಂ, ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ನಂದಿಲ, ಮೋನಪ್ಪ ಎಂ.ಅಳಿಕೆ, ಜತೆ ಕಾರ್ಯದರ್ಶಿ ಸ್ಥಾನಕ್ಕೆ ಹೀರಾ ಉದಯ್, ಮಮತಾ ಸುವರ್ಣ ಬಿ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ಮಹೇಶ್ ಕೆ. ಸವಣೂರು ಮತ್ತು ಚಿದಾನಂದ ರೈ. ಕೊಡಿಂಬಾಡಿ ಅವರು ಚುನಾವಣಾ ಕಣದಲ್ಲಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಚಿನ್ಮಯ್ ರೈ ಈಶ್ವರಮಂಗಲ ಅವರೋರ್ವರೇ ನಾಮಪತ್ರ ಸಲ್ಲಿಸಿರುವ ವ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಚುನಾವಣಾಧಿಕಾರಿಗಳಾಗಿ ಕೆ.ಭಾಸ್ಕರ್ ಕೋಡಿಂಬಾಳ, ಎನ್.ಕಿಶೋರ್ ಕೊಳತ್ತಾಯ, ದೀಪಕ್ ಬೊಳುವಾರು ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here