ಕುಂಬ್ರ: ಧರ್ಮಸ್ಥಳ ಒಕ್ಕೂಟದ ಮಾಸಿಕ ಸಭೆ, ವಿಶ್ವ ತಂಬಾಕು ದಿನಾಚರಣೆ ಮಾಹಿತಿ 

0

ಪುತ್ತೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ(ಬಿ ಸಿ ಟ್ರಸ್ಟ್) ಪುತ್ತೂರು ಇದರ ಕುಂಬ್ರ ಒಕ್ಕೂಟದ ಮಾಸಿಕ ಸಭೆಯು ಕರ್ನಾಟಕ ಪಬ್ಲಿಕ್ ಸ್ಕೂಲ್  ಕುಂಬ್ರದಲ್ಲಿ ಒಕ್ಕೂಟದ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಲಯ ಮೇಲ್ವಿಚಾರಕಿ ಜಯಂತಿಯವರು ಯೋಜನೆಯ ಬಗ್ಗೆ  ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂಬ್ರ ಕೆಪಿಎಸ್ ಸಹ ಶಿಕ್ಷಕ ಶಿವಪ್ಪ ರಾಥೋಡ್ ರವರು ವಿಶ್ವ ತಂಬಾಕು ದಿನಾಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ  ಶಶಿಕಲ ರೈಯವರು ವಾರದ ಸಭೆ ಬಗ್ಗೆ  ತಿಳಿಸಿದರು .ಜವಾಬ್ದಾರಿ ತಂಡಗಳಾದ ಸ್ಪಂದನ ಮತ್ತು ಸತ್ಯದೇವತೆ ಗುಂಪಿನ ಸದಸ್ಯರು ತಮ್ಮ ಗುಂಪಿನ ವರದಿಗಳನ್ನು ಮಂಡಿಸಿದರು. ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಒಕ್ಕೂಟದ 30 ಸಂಘದ ಅಧ್ಯಕ್ಷರು  ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು .ದಾಖಲಾತಿ ಸಮಿತಿಯವರು ಗುಂಪಿನ ನಡವಳಿ ಪುಸ್ತಕಗಳನ್ನು ಪರಿಶೀಲಿಸಿದರು . ಒಕ್ಕೂಟದ ಕಾರ್ಯದರ್ಶಿ ರಾಜೀವಿ ಒಕ್ಕೂಟದ ವರದಿ ವಾಚಿಸಿದರು.ವಿನೋದ ಮಗಿರೆ ಸ್ವಾಗತಿಸಿ ,ಬದ್ರುನ್ನಿಸ ಪರ್ಪುoಜ ವಂದಿಸಿದರು.

LEAVE A REPLY

Please enter your comment!
Please enter your name here