ರೆಂಜಲಾಡಿ ಮಸೀದಿಯಲ್ಲಿ ಈದುಲ್ ಅಝ್ಹಾ ಆಚರಣೆ

0

ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಅಝ್ಹಾ ಆಚರಿಸಲಾಯಿತು.ವಿಶೇಷ ನಮಾಜಿಗೆ ನೇತೃತ್ವ ನೀಡಿದ ರೆಂಜಲಾಡಿ ಮಸೀದಿಯ ಖತೀಬ್ ನಾಸಿರ್ ಫೈಝಿ ಮಾತನಾಡಿ ಬಕ್ರೀದ್ ಹಬ್ಬವು ತ್ಯಾಗದ ಸಂದೇಶ ಸಾರುವ ಹಬ್ಬವಾಗಿದ್ದು ನಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ತ್ಯಜಿಸಿ ಹೃದಯವನ್ನು ಶುದ್ಧೀಕರಿಸಲು ಈ ಹಬ್ಬವು ಪ್ರೇರಣೆಯಾಗಲಿ ಎಂದು ಅವರು ಆಶಿಸಿದರು.

ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ನ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಬಕ್ರೀದ್ ಹಬ್ಬವು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗದೆ ಅದರ ಸಂದೇಶ ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಕೆಯಾಗಬೇಕು, ನಿಷ್ಕಳಂಕ ಮನಸ್ಸಿನಿಂದ ಪ್ರತಿಯೊಬ್ಬರನ್ನು ಪ್ರೀತಿಸುವ, ಗೌರವಿಸುವ ಮನಸ್ಸು ನಮ್ಮದಾಗಬೇಕು ಎಂದು ಅವರು ಹೇಳಿದರು.
ರೆಂಜಲಾಡಿ ಮಸೀದಿಯ ಅಧ್ಯಕ್ಷ ಆರ್.ಎಂ ಅಲಿ ಹಾಜಿ, ಕಾರ್ಯದರ್ಶಿ ಝಯ್ನುದ್ದೀನ್ ಹಾಜಿ ಜೆ. ಎಸ್, ಸದರ್ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here