ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಯೋಗ ದಿನಾಚರಣೆಯ ಅಂಗವಾಗಿ ಯೋಗೈಕ್ಯ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್ ಗೌಡ ಇವರು ಮಾತನಾಡಿ “ಯೋಗದಿಂದ ಶಕ್ತಿ ರೋಗದಿಂದ ಮುಕ್ತಿ” ವಿಚಾರವಾಗಿ- ಸ್ವಸ್ಥ ದೇಹ ಸ್ವಾಸ್ಥ್ಯ ಮನಸ್ಸಿಗೆ ಈ ಯೋಗವು ಒಂದು ಸಿದ್ಧೌಷಧ. ಈ ಯೋಗ ದಿನಾಚರಣೆ ನಮ್ಮ ದೇಶಕ್ಕೆ ಒಂದು ಕೊಡುಗೆ ಇದರ ಸದ್ಬಳಕೆಯನ್ನು ನಾವು ನೀವೆಲ್ಲರೂ ಮಾಡೋಣ ಎಂದರು.

ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ರಾಜೇಶ್ ಎನ್ ಇವರು ನಿತ್ಯ ನಿರಂತರ ನಾವು ಯೋಗಭ್ಯಾಸವನ್ನು ಮಾಡುತ್ತಾ ಹೋದರೆ ಮುಂದೊಂದು ದಿನ ನಾವು ಕೂಡ ಬಾಬಾ ರಾಮ್ ದೇವ್, ಯೋಗೀಜಿ ,ಪತಂಜಲಿ ಮಹರ್ಷಿ, ಮೋದಿಜಿ ಇವರುಗಳ ಸಾಲಿನಲ್ಲಿ ಹೆಸರು ಮಾಡಬಹುದು ಎಂದು ಯೋಗದ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಆಡಳಿತ ಮಂಡಳಿ ಪೋಷಕರು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಜೊತೆ ಸೇರಿ ವಿಶಾಲ ಸಭಾಂಗಣದಲ್ಲಿ ವಿಶೇಷ ರೀತಿಯಲ್ಲಿ ಯೋಗ ದಿನಾಚರಣೆ ಮಾಡುವ ಸೌಭಾಗ್ಯ ದೂರ ಉಳಿದಿಲ್ಲ ಎಂದರು. ತದನಂತರದಲ್ಲಿ ಯೋಗ ಸಂಯೋಜಕಿ ಗೌತಮಿ ಹಾಗೂ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here