ನರಿಮೊಗರು: ಮರ ಬಿದ್ದು ನೆಲಕ್ಕುರುಳಿದ 5 ವಿದ್ಯುತ್ ಕಂಬ, ಅಪಾರ ನಷ್ಟ 

0

ಪುತ್ತೂರು: ನರಿಮೊಗರು ಜಂಕ್ಷನ್ ಬಳಿಯ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ 5 ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ಜು.14ರಂದು ನಡೆದಿದೆ.ಘಟನೆಯಲ್ಲಿ ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಮರ ಬಿದ್ದ ಬಳಿಕ ಅರಣ್ಯ ಇಲಾಖೆಯವರು ಮತ್ತು ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮುಂದಿನ ಕಾರ್ಯ ಕೈಗೊಂಡಿದ್ದು ಮರವನ್ನು ತೆರವು ಮಾಡಲಾಗಿದೆ. ಘಟನೆಯಿಂದ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ.

ಇನ್ನಷ್ಟು ಮರಗಳು ಅಪಾಯಕಾರಿ ಸ್ಥಿತಿಯಲ್ಲಿ..!
ನರಿಮೊಗರು ಜಂಕ್ಷನ್ ನ ಅನತಿ ದೂರದಲ್ಲಿ ಮತ್ತು ಪಾಪೆತ್ತಡ್ಕದಲ್ಲಿ ಅನೇಕ ಮರಗಳು ರಸ್ತೆಗೆ ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ. ಇದೇ ರಸ್ತೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿದ್ದು ಅಪಾಯದ ಮುನ್ಸೂಚನೆ ಇಲ್ಲಿ ಎದ್ದು ಕಾಣುತ್ತಿದೆ. ಈ ಬಗ್ಗೆ ಸುದ್ದಿ ಪತ್ರಿಕೆ ಮತ್ತು ವೆಬ್ ಸೈಟ್ ಸಚಿತ್ರ ವರದಿ ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here