ಪುತ್ತೂರು: ಮಾದಕ ವಸ್ತುಗಳು ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಳಕೆಯಾಗುತ್ತಿದ್ದು ಇದರ ವಿರುದ್ಧ ಜಾತಿ ಮತ ಭೇದವಿಲ್ಲದೆ ಹೋರಾಡುವುದು ಕಾಲದ ಅನಿವಾರ್ಯತೆಯಾಗಿದೆ ಎಂದು ಇರ್ದೆ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಹೇಳಿದರು.
ಎಸ್ಕೆಎಸ್‌ಎಸ್‌ಎಫ್ ಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ವತಿಯಿಂದ ಇರ್ದೆ ಬೆಟ್ಟಂಪಾಡಿ ಗ್ರಾ.ಪಂ ಸಭಾಭವನದಲ್ಲಿ ನಡೆದ ಮಾದಕ ವ್ಯಸನದ ವಿರುದ್ಧ ಜನಸಂಚಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಲಯ ಜೊತೆ ಕಾರ್ಯದರ್ಶಿ ಹಾಗೂ ಪರ್ಪುಂಜ ಜುಮಾ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಮಾತನಾಡಿ ಮಾದಕ ವ್ಯಸನ ಎಂಬ ಪಿಡುಗನ್ನು ಹೋಗಲಾಡಿಸಲು ಸಂಘ ಸಂಸ್ಥೆಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ತಲೆಮಾರು ಇದರ ಭೀಕರತೆಯನ್ನು ಅನುಭವಿಸಬೇಕಾದೀತು ಎಂದು ಹೇಳಿದರು.
ಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ಉಪಾಧ್ಯಕ್ಷ ಕೆ.ಕೆ ಇಸ್ಮಾಯಿಲ್ ಹಾಜಿ ಕೂಟತ್ತಾನ ಅಧ್ಯಕ್ಷತೆ ವಹಿಸಿದ್ದರುಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ಕಾರ್ಯಕಾರಿ ಸಮಿತಿ ಸದಸ್ಯ ಶಾಹುಲ್ ಹಮೀದ್ ಮುಸ್ಲಿಯಾರ್ ಕೀಲಂಪಾಡಿ ದುವಾ ನೆರವೇರಿಸಿದರು.
ಇಂಜಿನಿಯರ್ ಆಲಿಕುಂಞಿ ಹಾಜಿ ಕೊರಿಂಗಿಲ ಮಾತನಾಡಿ ಮಾದಕ ವ್ಯಸನದ ಬಗ್ಗೆ ನಮ್ಮ ಮನೆಯಿಂದಲೇ ಮೊದಲು ಅಭಿಯಾನ ಆರಂಭವಾಗಬೇಕು ಎಂದು ಹೇಳಿದರು.
ತಂಬುತ್ತಡ್ಕ ಜುಮಾ ಮಸೀದಿಯ ಉಪಾಧ್ಯಕ್ಷ ಆಸಿಫ್ ಹಾಜಿ ತಂಬುತ್ತಡ್ಕ ಮಾತನಾಡಿ ಈ ಅಭಿಯಾನ ಶಾಲಾ ಕಾಲೇಜುಗಳನ್ನು, ಕ್ಯಾಂಪಸ್‌ಗಳನ್ನು ಕೇಂದ್ರೀಕರಿಸಿ ನಡೆಸುವಂತಾಗಬೇಕು ಎಂದು ಹೇಳಿದರು.
ಎಸ್ಕೆಎಸ್‌ಎಸ್‌ಎಫ್ ಇರ್ದೆ ಶಾಖೆಯ ಸದಸ್ಯ ದಾರುಲ್ ಅಶ್ಹರಿಯ್ಯಾ ಸುರಿಬೈಲು ದರ್ಸ್ ವಿದ್ಯಾರ್ಥಿ ಮುಹಮ್ಮದ್ ರಾಫಿಹ್ ಎಂಪಕಲ್ಲು ಮಾತನಾಡಿ ನಮ್ಮ ದೇಶದಲ್ಲಿ ನಡೆಯುವ ಅತ್ಯಾಚಾರ ಅನಾಚಾರ ಹತ್ಯೆಗಳಂತಹ ದುಷ್ಕ್ರತ್ಯಗಳಿಗೆ ಮಾದಕವಸ್ತುಗಳಾದ ಅಮಲು ಪಧಾರ್ಥಗಳ ಬಳಕೆಯೆ ಕಾರಣ ಎಂದರು.
ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯಿದು ಕುಂಞಿ ಕೋನಡ್ಕ, ಹಿರಿಯರಾದ ಅಬೂಬಕ್ಕರ್ ಕೊರಿಂಗಿಲ, ಅಬ್ದುಲ್ಲ ಹಾಜಿ ಚೂರಿಪದವು, ಅನಿವಾಸಿ ಉದ್ಯಮಿ ಮುಹಮ್ಮದ್ ಕುಂಞಿ ಕೂಟತ್ತಾನ, ಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ಪ್ರ.ಕಾರ್ಯದರ್ಶಿ ಹನೀಫ್ ಪೊಸೋಟಿಮಾರ್, ಕೊರಿಂಗಿಲ ಶಾಖೆಯ ಸದಸ್ಯರಾದ ಅಬ್ದುಲ್ಲ ಮೌಲವಿ ಬೇಂಗತ್ತಡ್ಕ, ಉಬೈದ್ ಗುಂಡ್ಯಡ್ಕ, ಇರ್ದೆ ಶಾಖೆಯ ಸದಸ್ಯರಾದ, ಶರೀಫ್ ಮುಸ್ಲಿಯಾರ್ ಪೋಸೊಟಿಮಾರ್, ಶರೀಫ್ ರೋಯಲ್ ಕುಂಞಿಲಡ್ಕ, ಉಮ್ಮರ್ ಬೇರಿಕೆ , ಕಾರ್ಯದರ್ಶಿ ಇರ್ಷಾದ್ ಎಂಪಕಲ್ಲು, ಅಫ್ರಾಝ್ ಪೊಸೊಟಿಮಾರ್, ಬೆಟ್ಟಂಪಾಡಿ ಶಾಖೆಯ ಸದಸ್ಯರಾದ ಆರಿಫ್ ರೆಂಜ, ಶಾಹುಲ್ ಹಮೀದ್ ಕೂಟತ್ತಾನ, ಮುಹಮ್ಮದ್ ಕೋನಡ್ಕ, ಸ್ಥಳೀಯರಾದ ಸಿದ್ದೀಕ್ ತಂಬುತ್ತಡ್ಕ, ಅಬ್ಬಾಸ್ ನಿಡ್ಪಳ್ಳಿ, ಮೋನುಚ್ಚ ನಿಡ್ಪಳ್ಳಿ, ಅಲಿ ಕಕ್ಕೂರು, ವಿದ್ಯಾರ್ಥಿಗಳಾದ ಆದಿಲ್ ಅಫ್‌ಹಂ, ಅಹದ್. ಶುಹೈಬ್ ಮೊದಲಾದವರು ಉಪಸ್ಥಿತರಿದ್ದರು.
ಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ಅಧ್ಯಕ್ಷ ಹನೀಫ್ ದಾರಿಮಿ ತಲಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಇರ್ದೆ ಬೆಟ್ಟಂಪಾಡಿ ಕ್ಲಸ್ಟರ್ ಕೋಶಾಧಿಕಾರಿ ಅಬ್ದುಲ್ ಜಲೀಲ್ ಕೂಟತ್ತಾನ ವಂದಿಸಿದರು.