ನಾರ್ಯಬೈಲು ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

0

ಕಾಣಿಯೂರು: ನಾರ್ಯಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಆಟಿಡೊಂಜಿ ದಿನ ‘ ಕಾರ್ಯಕ್ರಮ ನಡೆಯಿತು.

ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಮರಕ್ಕಡ ಮಾತನಾಡಿ ಇದೊಂದು ಪ್ರೇರಣದಾಯಕ ಕಾರ್ಯಕ್ರಮ ಎಂದರು. ಹಿರಿಯರಾದ ಸೀತಾರಾಮ ಗೌಡ ಮುಂಡಾಲ, ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳ ಮಹತ್ವವನ್ನು ತಿಳಿಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರವೀಣ ಮರಕ್ಕಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಜೋಯ್ಸ್ ಹೇಮಲತ ಗಂಗೇರ ಸ್ವಾಗತಿಸಿ, ಆಟಿ ಮಾಸದ ವಿಶೇಷತೆ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಕೇಶವ ಮರಕ್ಕಡ ಮಾತನಾಡಿ, ಆಟಿ ಮಾಸದ ವಿಶೇಷತೆಯನ್ನು ಹೆತ್ತವರು ಮನೆಯಲ್ಲಿ ಮಕ್ಕಳಿಗೆ ತಿಳಿಸಬೇಕೆಂದರು. ಉಪಾಧ್ಯಕ್ಷೆ ಮೋಹನಿ ನಾರ್ಯ, ಸದಸ್ಯರಾದ ಗಣೇಶ, ಚನಿಯ, ರೇವತಿ ಶುಭಹಾರೈಸಿದರು. ವಿದ್ಯಾರ್ಥಿಗಳು, ಹೆತ್ತವರು, ಊರಿನವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪೋಷಕರು ತಯಾರಿಸಿ ತಂದ ವಿವಿಧ ರೀತಿಯ ಖಾದ್ಯಗಳನ್ನು ಸಭೆಯಲ್ಲಿ ಹಂಚಲಾಯಿತು. ಶಿಕ್ಷಕಿ ಸೌಮ್ಯ ವಂದಿಸಿದರು.

LEAVE A REPLY

Please enter your comment!
Please enter your name here