ವಿಶ್ವದ ಅತಿ ದೊಡ್ಡ ಎಜ್ಯುಕೇಶನ್ ನೆಟ್‌ವರ್ಕ್ ಸಂಸ್ಥೆ ಇದೀಗ ಪುತ್ತೂರಿನಲ್ಲಿ – ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ಶುಭಾರಂಭ

0

ಕಲಿಕೆಯೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿ-ವಂ|ಲಾರೆನ್ಸ್ ಮಸ್ಕರೇನ್ಹಸ್
ಕುಗ್ಗದೆ ಜಯಿಸುತ್ತೇನೆ ಎಂದಾಗ ಯಶಸ್ವಿ ಉದ್ಯಮಿ ಎಂದೆನೆಸಿಕೊಳ್ಳುತ್ತಾನೆ-ಜಯಂತ್ ನಡುಬೈಲು
ಶಿಕ್ಷಣ ಕೇಂದ್ರಗಳು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಬೇಕು-ವಂ|ಆಂಟನಿ ಪ್ರಕಾಶ್

ಪುತ್ತೂರು: 22 ದೇಶಗಳಲ್ಲಿ 8೦೦+ ಗುಣಮಟ್ಟದ ತರಬೇತಿ ಕೇಂದ್ರಗಳೊಂದಿಗೆ ಐ.ಎಸ್.ಒ ಪ್ರಮಾಣೀಕೃತ ಶಿಕ್ಷಣ ಜಾಲವಾಗಿರುವ ವಿಶ್ವದ ಅತಿದೊಡ್ಡ ಐಟಿ ಎಜ್ಯುಕೇಶನ್ ನೆಟ್‌ವರ್ಕ್ ಸಂಸ್ಥೆಯು ಇದೀಗ ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದ್ದು ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ಹೆಸರಿನಲ್ಲಿ ಆ.24ರಂದು ದರ್ಬೆ ಪ್ರೀತಿ ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು.

ಕಲಿಕೆಯೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಬಳಿಕ ಸಂಸ್ಥೆಗೆ ಪವಿತ್ರ ಜಲವನ್ನು ಸಿಂಪಡಿಸುವ ಮೂಲಕ ಮಾತನಾಡಿ, ದೇವರು ಜ್ಞಾನದ ಉಗಮ. ಶಿಕ್ಷಣದ ಮೂಲಕ ಜ್ಞಾನ ದೊರಕುತ್ತದೆ. ಪ್ರಸ್ತುತ ಜಗತ್ತು ಶರವೇಗದಲ್ಲಿ ಮುಂದುವರೆಯುವಾಗ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಅವಿಷ್ಕಾರಗಳೂ ನಡೆಯುತ್ತಿರುತ್ತದೆ. ಪ್ರತಿಯೋರ್ವರೂ ಆಧ್ಯಾತ್ಮಿಕ ಬೆಳಕಿನಲ್ಲಿ, ಜ್ಞಾನದ ಬೆಳಕಿನಲ್ಲಿ ಮುಂದುವರೆದಾಗ ಪರಸ್ಪರ ಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ವಿದ್ಯಾಮಾನದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಅಳವಡಿಸಿಕೊಂಡಾಗ ಜೀವನ ಫಲಪ್ರದವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಆಶೀರ್ವಚನ ನೀಡುವ ಮೂಲಕ ಶುಭ ಹಾರೈಸಿದರು.

ಕುಗ್ಗದೆ ಜಯಿಸುತ್ತೇನೆ ಎಂದಾಗ ಯಶಸ್ವಿ ಉದ್ಯಮಿ ಎಂದೆನೆಸಿಕೊಳ್ಳುತ್ತಾನೆ-ಜಯಂತ್ ನಡುಬೈಲು
ಅಕ್ಷಯ ಕಾಲೇಜಿನ ಚೇರ್‌ಮನ್ ಜಯಂತ ನಡುಬೈಲುರವರು ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಮುಂದುವರೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹೊಸ ಹೊಸ ಆವಿಷ್ಕಾರಗಳು ಬರುತ್ತಿದ್ದು ನಾವು ಅದನ್ನು ಸ್ವೀಕರಿಸಿಕೊಳ್ಳಬೇಕಾಗಿದೆ. ಜಿ.ಟೆಕ್ ಕಂಪ್ಯೂಟರ್ ಸಂಸ್ಥೆಯು ಹಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ಇದೀಗ ಪುತ್ತೂರಿಗೆ ಕಾಲಿಟ್ಟಿರುವುದು ನಮ್ಮ ಭಾಗ್ಯವೇ ಸರಿ. ಸಂಸ್ಥೆಯನ್ನು ಆರಂಭಿಸಿದವರ ಬೆನ್ನ ಹಿಂದೆ ನಮ್ಮೆಲ್ಲರ ಪ್ರೋತ್ಸಾಹದ ಅಗತ್ಯ ಖಂಡಿತಾ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಕುಗ್ಗದೆ ಜಯಿಸುತ್ತೇನೆ ಎಂದು ಮುಂದಡಿ ಇಟ್ಟಾಗ ಅವರೋರ್ವ ಯಶಸ್ವಿ ಉದ್ಯಮಿ ಎಂದೆನೆಸಿಕೊಳ್ಳುತ್ತಾನೆ ಎಂದು ಹೇಳಿ ಶುಭ ಹಾರೈಸಿದರು.

ಶಿಕ್ಷಣ ಕೇಂದ್ರಗಳು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಬೇಕು-ವಂ|ಆಂಟನಿ ಪ್ರಕಾಶ್
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ.ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಜಗತ್ತಿನಲ್ಲಿ ಬಳಕೆಗೆ ಯೋಗ್ಯವಾಗಿರುವ ಸೂಕ್ಷ್ಮವಾದ ಇಂಜಿನ್ ಇರುವುದು ಅದು ವಿಮಾನದ ಇಂಜಿನ್. ಅದೇ ರೀತಿ ಮನುಷ್ಯ ಬಳಸಬಹುದಾದ ಕಂಪ್ಯೂಟರ್ ಎಂಬ ಮೆಷಿನ್ ಕೂಡ ಸೂಕ್ಷ್ಮವಾದದ್ದೇ. ಕಂಪ್ಯೂಟರ್ ಇದರಲ್ಲಿ ಒಳಿತು, ಕೆಡುಕು ಎರಡೂ ಇದೆ. ಆದರೆ ಅದರಲ್ಲಿ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿದೆ. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಕಲಿತುಕೊಂಡು, ಮನುಷ್ಯತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಜೀವಿಸಿದಾಗ ಶಿಕ್ಷಣ ಕೇಂದ್ರಗಳು ಉತ್ತಮ ಶಿಕ್ಷಣ ಕೇಂದ್ರಗಳಾಗಬಲ್ಲವು ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿ-ಟೆಕ್ ಕಂಪ್ಯೂಟರ್ ಎಜ್ಯಕೇಶನ್ ಸೆಂಟರ್‌ನ ಪುತ್ತೂರು ಸೆಂಟರ್ ನಿರ್ದೇಶಕ ಸಂತೋಷ್ ಕ್ರಾಸ್ತಾ, ಸೆಂಟರ್ ಮ್ಯಾನೇಜರ್ ಆಕಾಶ್, ವಿದ್ಯಾರ್ಥಿ ಕೌನ್ಸಿಲರ್‌ಗಳಾದ ನಿಶಿತಾ ಮತ್ತು ಸ್ವಪ್ನ, ಮಲ್ಟಿಮೀಡಿಯಾ ಫ್ಯಾಕಲ್ಟಿಯ ಸಂಜಯ್ ಶಂಕರ್, ಜಿ-ಟೆಕ್ ಮಂಗಳೂರು ಸಂಸ್ಥೆಯ ಅಬೂಬಕ್ಕರ್, ಜಿ-ಟೆಕ್ ಕಂಪ್ಯೂಟರ್ ಎಜ್ಯಕೇಶನ್ ಸೆಂಟರ್‌ನ ಪುತ್ತೂರು ಸೆಂಟರ್ ನಿರ್ದೇಶಕ ಸಂತೋಷ್ ಕ್ರಾಸ್ತಾರವರ ತಂದೆ ಎಲ್ಯಾಸ್ ಕ್ರಾಸ್ತಾ, ತಾಯಿ ರೀಟಾ ಮೀನಾ ಕ್ರಾಸ್ತಾ, ಅಕ್ಕ ಸುಶ್ಮಾ ಕ್ರಾಸ್ತಾ, ಭಾವ ವಿಜಯ್ ಡಿ’ಸೋಜ, ಸಹೋದರ ಸಂದೇಶ್ ಕ್ರಾಸ್ತಾ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶೇ.30 ರಿಯಾಯಿತಿ ಆಫರ್..
ಸೆ.14ರ ವರೆಗೆ ಮಾತ್ರ..
ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಇಂಡಿಯನ್ ಆಂಡ್ ಫಾರಿನ್ ಎಕೌಂಟಿಂಗ್(ಡಿಐಎಫ್‌ಎ), ಪೋಸ್ಟ್ ಗ್ರ್ಯಾಜ್ಯುವೆಟ್ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್(ಪಿಜಿಡಿಸಿಎ), ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್(ಡಿಸಿಎ), ಡಿಪ್ಲೋಮಾ ಇನ್ ಗ್ರಾಫಿಕ್ಸ್ ಆಂಡ್ ಇನ್ಫಾರ‍್ಮೇಶನ್ ಟೆಕ್ನೋಲಜಿ(ಡಿಜಿಐಟಿ), ಪ್ರೊಫೆಶನಲ್ ಕಂಪ್ಯೂಟರ್ ಇನ್ಸ್ಟ್ರಕ್ಟರ್(ಪಿಸಿಐ), ವರ್ಡ್ ಪ್ರಾಸೆಸಿಂಗ್ ಆಂಡ್ ಡಾಟ ಎಂಟ್ರಿ, ಟ್ಯಾಲಿ, ಟ್ಯಾಲಿ ಜಿಎಸ್‌ಟಿ, ಮಲ್ಟಿಮೀಡಿಯಾ ಕೋರ್ಸ್‌ಸ್ ಸಹಿತ ವಿವಿಧ ತರಬೇತಿ ಕೋರ್ಸ್‌ಗಳು ಲಭ್ಯವಿದ್ದು ಸಂಸ್ಥೆಯಲ್ಲಿ ಯಾವುದೇ ಕೋರ್ಸ್‌ಗಳಿಗೆ ಸೇರ ಬಯಸುವವರಿಗೆ ಶೇ.30 ರಿಯಾಯಿತಿ ಲಭ್ಯವಿದೆ. ಈ ಆಫರ್ ಸೆಪ್ಟೆಂಬರ್ 14ರ ವರೆಗೆ ಮಾತ್ರ ಲಭ್ಯವಿದ್ದು ಆದಷ್ಟು ಬೇಗ ನೋಂದಣಿಗೊಳಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here