ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.205.21 ಕೋಟಿ ವ್ಯವಹಾರ | ರೂ.1 ಕೋಟಿ 03 ಲಕ್ಷ ಲಾಭ | ಶೇ.14 ಡಿವಿಡೆಂಡ್

ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ205.21 ಕೋಟಿ ವ್ಯವಹಾರ ಮಾಡಿ ರೂ.1 ಕೋಟಿ 03 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.98.17 ಸಾಲ ಮರುಪಾವತಿಯಾಗಿದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆಯಲಾಗಿದೆ. ಶೇ.14 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಘೋಷಿಸಿದರು.


ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾ ಭವನದಲ್ಲಿ ನಡೆದ 2023-24ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಹಕಾರಿ ಸಂಘದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.21.58 ಕೋಟಿ ಠೇವಣಿ ಸಂಗ್ರಹವಿರುತ್ತದೆ, ಸದಸ್ಯರ ಹೊರಬಾಕಿ ಸಾಲ ರೂ. 29.26 ಕೋಟಿ ಇರುತ್ತದೆ. 2014ರಲ್ಲಿ ನನ್ನ ಅಧ್ಯಕ್ಷತೆಯ ಆಡಳಿತ ಮಂಡಳಿಯ ಅಧಿಕಾರ ಬಂದ ಬಳಿಕ ಹಂತ ಹಂತವಾಗಿ ಅಭಿವೃದ್ದಿಪಥದಲ್ಲಿ ಕೊಂಡೊಯ್ದು ಅತೀ ಹೆಚ್ಚು ಲಾಭಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ ಅವರು ಪ್ರಸಕ್ತ ಸಾಲಿನ ವರ್ಷದಲ್ಲಿ ಭೂಮಿ ಖರೀದಿ ಸಾಲ ಯೋಜನೆಯಲ್ಲಿ 10 ಜನ ಸದಸ್ಯರಿಗೆ ಭೂಮಿ ಖರೀದಿಸಲು ಸಾಲ ನೀಡಲಾಗಿರುತ್ತದೆ. ಸುಮಾರು 678 ರೈತ ಸದಸ್ಯರಿಗೆ ಬೆಳೆ ವಿಮಾ ಯೋಜನೆಯಲ್ಲಿ ಜೋಡಣೆ ಮಾಡಿ ರೂ.40.60 ಲಕ್ಷ ಪ್ರೀಮಿಯಂನ್ನು ಪಾವತಿಸಲಾಗಿರುತ್ತದೆ.


ಸತತ 6ನೇ ಬಾರಿ ಪ್ರಶಸ್ತಿ:
ಉತ್ತಮ ಸಾಧನೆಗಾಗಿ ನಮ್ಮ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 6ನೇ ಬಾರಿ ಪ್ರಶಸ್ತಿ ಲಭಿಸಿರುತ್ತದೆ. ಈ ಎಲ್ಲಾ ಸಾಧನೆಗಳ ಹಿಂದೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮತ್ತು ಸಿಬ್ಬಂದಿಗಳ ಶ್ರಮ ಇರುತ್ತದೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ನೀಡಿರುವ ಸಹಕಾರ, ಸಹಕಾರಿ ಸಂಘದ ಸದಸ್ಯರ ಬೆಂಬಲದಿಂದಾಗಿ ನಮ್ಮ ಸಹಕಾರಿ ಸಂಘವು ಈ ಹಂತಕ್ಕೆ ಅಭಿವೃದ್ದಿ ಹೊಂದಲು ಮೂಲ ಕಾರಣವಾಗಿರುತ್ತದೆ ಎಂದು ಹೇಳಿದ ಆಲಿಯವರು, ನಮ್ಮ ಸಹಕಾರಿ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ತನು ಮನ ಧನಗಳಿಂದ ಸಂಪೂರ್ಣ ಸಹಕಾರ ನೀಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್‌ರವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಙತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.


31 ಹಿರಿಯ ಸದಸ್ಯರಿಗೆ ಸನ್ಮಾನ:
ಮಹಾಸಭೆಯ ವೇದಿಕೆಯಲ್ಲಿ 31 ಮಂದಿ ಅತ್ಯಂತ ಹಿರಿಯ ಈಗಲೂ ಸಂಘದಲ್ಲಿ ವ್ಯವಹಾರ ನಡೆಸುತ್ತಿರುವ ಸದಸ್ಯರಾದ ಮುಕುಂದ ಪ್ರಭು ನೆಕ್ಕರೆ, ಸಂಕಪ್ಪ ಭಂಡಾರಿ ಕಜಾನೆಮೂಲೆ, ಮಾಜಿ ನಿರ್ದೇಶಕ ಕೃಷ್ಣ ನಾಯ್ಕ ಅಡ್ಕ, ಮಂಜಪ್ಪ ರೈ ಬಾರಿಕೆ, ಸಂಜೀವ ರೈ ಯಸ್ ಸಂಪ್ಯದಮೂಲೆ, ಇಸ್ಮಾಯಿಲ್ ಎಸ್ ಸಂಪ್ಯ, ಅಬ್ಬಾಸ್ ಹೊಸಮನೆ, ಇಸುಬು ಹೊಸಮನೆ, ಸೋಮಶೇಖರ ಭಟ್ ಬಂಗಾರಡ್ಕ, ಲಿಂಗಪ್ಪ ಗೌಡ ಕಂಡಿಗ, ಮಾಜಿ ನಿರ್ದೇಶಕ ದೇವಣ್ಣ ನಾಯಕ್ ಮರಿಕೆ, ಚಂದ್ರಶೇಖರ ನಾಯಕ್ ಮರಿಕೆ, ನಾರಾಯಣ ಶೆಟ್ಟಿ ಜಿ.ಟಿ ಗೆಣಸಿನಕುಮೇರು, ಮಾಜಿ ನಿರ್ದೇಶಕ ರವೀಂದ್ರನಾಥ ಕಲ್ಲೂರಾಯ ಕಂಜೂರುಪಂಜ, ಸಾಂತಪ್ಪ ಪೂಜಾರಿ ಕುಂಜೂರು ಪಂಜ, ಕಿಟ್ಟಣ್ನ ರೈ ಕಲ್ಕೋಟೆ, ಬೀರಣ್ಣ ರೈ ಎಮ್ ಮೊಡಪ್ಪಾಡಿಮೂಲೆ. ವಿಠಲ ಆಳ್ವ ತೋಟ್ಲ, ಗೋಪಾಲಕೃಷ್ಣ ಜೋಯಿಸ ಡೆಮ್ಮಲೆ, ಮಾಜಿ ನಿರ್ದೇಶಕ ಪದ್ಮಯ್ಯ ಗೌಡ ಪೊಯ್ಯೆ, ಶಂಕರನಾರಾಯಣ ಭಟ್ ಮರೀಲು, ಬಾಲಕೃಷ್ಣ ನಕ್ಷತ್ರಿತ್ತಾಯ ಕುರಿಯ, ಆನಂದ ಪೂಜಾರಿ ಬೊಳಂತಿಮಾರು, ಅಬ್ದುಲ್ಲ ಡಿಂಬ್ರಿ, ಇಸುಬು ಬ್ಯಾರಿ ಡಿಂಬ್ರಿ, ವೆಂಕಟ್ರಮಣ ನಕ್ಷತ್ರಿತ್ತಾಯ ಕೊಡ್ಲಾರು, ಬೈಂಕಿ ರೈ ಅಡ್ಯೆತ್ತಿಮಾರು, ಶೇಷಪ್ಪ ನಾಯ್ಕ ಹೊಸಮಾರು, ಕಮಲರಯ ಡಿಂಬ್ರಿ, ದಯಾನಂದ ರೈ ಡಿಂಬ್ರಿ, ಮತ್ತು ಸುಬ್ರಾಯ ಮಡ್ಕುಳ್ಳಾಯ ಕೈಂತಿಲ ಇವರುಗಳನ್ನು ವಿಧಾನಪರಿಷತ್ ಶಾಸಕರಾದ ಐವನ್ ಡಿ’ಸೋಜರವರು ಮಹಾಸಭೆಯಲ್ಲಿ ಸನ್ಮಾನಿಸಿದರು. ರಂಗಭೂಮಿ ಹಾಗೂ ಚಲನಚಿತ್ರ ನಟ, ಸಂಘದ ಸದಸ್ಯ, ರಿಷಭ್ ಶೆಟ್ಟಿ ನಿರ್ಮಾಣದ ಲಾಫಿಂಗ್ ಬುದ್ದ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿಜಯಹರಿ ರೈ ಬಳ್ಳಮಜಲು ಇವರನ್ನು ಸನ್ಮಾನಿಸಲಾಯಿತು.


ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್‌ರವರು ಸಂಘದ ಮಹಾಸಭೆಯ ಆಮಂತ್ರಣ ಪತ್ರ ಮತ್ತು ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು. ಸಂಘದ ವ್ಯವಸ್ಥಾಪಕರಾದ ಅಜಿತ್ ಕುಮಾರ್ ರೈಯವರು 2023-24ನೇ ಸಾಲಿನ ವಾರ್ಷಿ ವರದಿ, ಆಯವ್ಯಯ ಪಟ್ಟಿ, ಅಂದಾಜು ಬಜೆಟ್, ಮೊದಾಲಾದವುಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು, ಶ್ರೀಮತಿ ತೆರೇಜಾ ಎಂ.ಸಿಕ್ವೇರಾ, ತಿಮ್ಮಪ್ಪ ಜಂಗಮುಗೇರು, ಸಂಶುದ್ದೀನ್ ನೀರ್ಕಜೆ, ರಂಜಿತ್ ಬಂಗೇರ ಸಂಪ್ಯ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕರಾದ ಶರತ್ ಡಿ. ಉಪಸ್ಥಿತರಿದ್ದರು.


ಶ್ರೀಮತಿ ಶೋಭಾವತಿ ರೈ ಕುರಿಯ ಪ್ರಾರ್ಥಿಸಿದರು, ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಸ್ವಾಗತಿಸಿ, ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು ವಂದಿಸಿದರು. ಸಂಘದ ಸಿಬ್ಬಂದಿ ಉಮೇಶ್ ಯಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಸುಭಾಷಿನಿ ವಿ ರೈ, ವಿನಯ್ ಕುಮಾರ್ ರೈ, ವಸಂತ ಗೌಡ, ಶ್ರೀಮತಿ ಪ್ರಶಾಂತಿ, ಅರ್ಜುನ್ ಭಾಸ್ಕರ್ ನವೋದಯ ಸ್ವ-ಸಹಾಯ ಸಂಘದ ಪ್ರೇರಕಿ ಶ್ರೀಮತಿ ಮೋಹಿನಿ ಹಾಗೂ ನವೋದಯ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯ ಕಲಾಪಕ್ಕೆ ಸಹಕರಿಸಿದರು.

ಅಧ್ಯಕ್ಷರಿಂದ ಹೊಸ ಯೋಜನೆಗಳ ಘೋಷಣೆ..
ಸಂಘದ ಬೈಲಾದಲ್ಲಿರುವ ವ್ಯಾಪಾರ ಸಾಲ(ಒ.ಡಿ.ಸಾಲ)ಗೃಹ ಉಪಯೋಗಿ ವಸ್ತುಗಳ ಸಾಲ, ವ್ಯಾಪಾರದ ಸರಕುಗಳ ಸಾಲ, ಮತ್ತು ವೇತನ ಆಧಾರಿತ ಸಾಲ(ಸರಕಾರಿ ನೌಕರರಿಗೆ ಮಾತ್ರ) ಈ ಸಾಲಗಳನ್ನು ಸಾಲದ ಒಳ ನಿಯಾಮಾವಳಿಯಂತೆ ನೀಡಲಾಗುವುದು ಹಾಗೂ ಜಾಮೀನು ಆಧಾರಿತ ಸಾಲದ ಮಿತಿಯನ್ನು 10000 ದಿಂದ 25000ಕ್ಕೆ ಹೆಚ್ಚಳ ಮಾಡುವುದಾಗಿ ಆಧ್ಯಕ್ಷರಾದ ಎಚ್.ಮಹಮದ್ ಆಲಿರವರು ಘೋಷಣೆ ಮಾಡಿದರು.

ಎಂಎಲ್‌ಸಿ ಐವನ್ ಡಿ’ಸೋಜರವರಿಗೆ ಸನ್ಮಾನ..
ಸಹಕಾರಿ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಿ ಇದೀಗ 2ನೇ ಬಾರಿಗೆ ಕರ್ನಾಟಕ ವಿಧಾನಪರಿಷತ್ತಿನ ಶಾಸಕರಾಗಿ ಆಯ್ಕೆಯಾಗಿರುವ ಐವಾನ್ ಡಿ’ಸೋಜರವರನ್ನು ಸಹಕಾರ ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿ’ಸೋಜರವರು, ಕೋಟಿ ವ್ಯವಹಾರವನ್ನು ಪಾರದರ್ಶಕವಾಗಿ ನಡೆಸಿದ ಈ ಸೊಸೈಟಿಗೆ ಸತತ ಆರು ಬಾರಿ ಪ್ರಶಸ್ತಿ ಪುರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷರ, ನಿರ್ದೇಶಕರ ಕಾರ್ಯದಕ್ಷತೆ, ಸಿಬ್ಬಂದಿಗಳ ಸಹಕಾರ ಮೆಚ್ಚಲೇಬೇಕು. ನಾನು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೂ ಸೊಸೈಟಿಯಲ್ಲೂ ತೊಡಗಿಸಿಕೊಂಡಿರುವೆನು. ಸಹಕಾರಿ ಸಂಘವು ಇರುವುದು ರೈತರ ಪರವಾಗಿ, ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದನೆ ನೀಡುವ ಸಲುವಾಗಿ. ರೈತ ಬೆಳೆದರೆ ಸಹಕಾರಿ ಬೆಳೆದಂತೆ. ಸಹಕಾರಿ ಸಂಘ ಊರಿನಲ್ಲಿದ್ರೆ ಮನೆಯಲ್ಲಿ ಬ್ಯಾಂಕ್ ಇದ್ದಂತೆ. ಸಿದ್ಧರಾಮಯ್ಯ ಸರಕಾರ ಅದು ರೈತರ ಪರ ಸರಕಾರ. ರಾಜ್ಯ ಸರಕಾರವು ಎಂದಿಗೂ ರೈತರ ಪರವಾಗಿ ಕೆಲಸ ಮಾಡುತ್ತದೆ. ರೈತರ ಹಾಗೂ ಜನಸಾಮಾನ್ಯರ ಸಮಸ್ಯೆ ಬಗ್ಗೆ ಹಾಗೂ ರೈತರಿಗೆ ಸಿಗುವ ಸಲವತ್ತುಗಳ ಬಗ್ಗೆ ನಾನು ಎಂದಿಗೂ ಧ್ವನಿ ಎತ್ತುತ್ತೇನೆ ಎಂದರು.

LEAVE A REPLY

Please enter your comment!
Please enter your name here