ಪುತ್ತೂರು: ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಶಾಂತಿನಗರ ಸವಣೂರು ಇದರ ವತಿಯಿಂದ ವಾರ್ಷಿಕ ಮೌಲಿದ್ ಹಾಗೂ ವಾರ್ಷಿಕ ಮಹಾಸಭೆ ಮತ್ತು ಸಂಘಟನೆಯ ಗೌರವಾಧ್ಯಕ್ಷರಾಗಿ ಸೇವೆಗೈದು ಇತ್ತೀಚೆಗೆ ನಿಧನರಾದ ಇಬ್ರಾಹಿಂ ಗಡಿಪ್ಪಿಲರವರ ಅನುಸ್ಮರಣೆಯು ಸಮಿತಿಯ ಗೌರವಾಧ್ಯಕ್ಷರಾದ ಅಬ್ದುಲ್ ಸಮದ್ ಸೋಂಪಾಡಿಯವರ ಅಧ್ಯಕ್ಷತೆಯಲ್ಲಿ ಫೆಡರೇಶನ್ ಕಚೇರಿಯಲ್ಲಿ ಸೆ.29ರಂದು ನಡೆಯಿತು. ಯಾಕೂಬ್ ದಾರಿಮಿ ದುವಾ ನೆರವೇರಿಸಿದರು. ರಶೀದ್ ದಾರಿಮಿ ಸಭೆ ಉದ್ಘಾಟಿಸಿದರು.
ಈಡನ್ ಗ್ಲೋಬಲ್ ಸ್ಕೂಲ್‌ನ ಟ್ರಸ್ಟಿ ಅಬ್ದುಲ್ ಖಾದರ್ ಹಾಜಿ ಸಹಲ್, ಅಬ್ದುಲ್ ರಝಾಕ್ ಕೆನರಾ, ಎಂ ಎ ರಫೀಕ್ ಮಾಂತೂರು, ಝಕರಿಯ ಮಾಂತೂರು ಶುಭ ಹಾರೈಸಿದರು. ವೇದಿಕೆಯಲ್ಲಿ ಬಿಜೆಎಂ ಚಾಪಳ್ಳ ಇದರ ಅಧ್ಯಕ್ಷ ಮುಹಮ್ಮದ್ ಹಾಜಿ ಕಣಿಮಜಲ್, ಉಪಾಧ್ಯಕ್ಷ ಬಿ.ಎಂ ಮುಹಮ್ಮದ್ ಕಾಯರ್ಗ, ಉಮರ್ ಹಾಜಿ ಕೆನರಾ, ಖಾಸಿಂ ಹಾಜಿ ಕೇಕುಡೆ, ಅಬ್ದುಲ್ ರಝಾಕ್ ಎಸ್ ಆರ್, ರಝಾಕ್ ಚಾಪಲ್ಲ, ಹಾಗೂ ಎಎಂವೈಎಫ್ ಶಾಮತಿನಗ ಇದರ ಅಧ್ಯಕ್ಷ ಅಶ್ರಫ್ ಉರ್ಸಾಗ್ ಉಪಸ್ಥಿತರಿದ್ದರು. ನಂತರ 2024-2025ನೇ ಸಾಲಿನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕರೀಂ ಎಸ್ ಮೌಲಾ, ಉಪಾಧ್ಯಕ್ಷರಾಗಿ ಅಬ್ದುಲ್ ಕರೀಂ ನಡುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ನಾಸಿರ್ ಮೌಲ, ಜೊತೆ ಕಾರ್ಯದರ್ಶಿಯಾಗಿ ಶಬೀರ್, ಕೋಶಾಧಿಕಾರಿಯಾಗಿ ಅಶ್ರಫ್ ಊರ್ಸಾಗ್, ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಜನತಾ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಮುಹಮ್ಮದ್ ಕುಂಞಿ ಬಾಬ, ಹಮೀದ್ ವಾಟರ್, ಹಂಝ ಸರ್ವೆ, ಹುಸೈನ್ ಸಮಹಾದಿ, ಸಬೀರ್ ಶಾಂತಿನಗರ, ಇಸ್ಮಾಯಿಲ್ ಬೀಟಿಗೆ, ಇಸ್ಮಾಯಿಲ್ ಐಡಿಯಲ್‌ರವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಕರೀಂ ಮೌಲಾ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು, ಅಶ್ರಫ್ ಜನತಾ ಸ್ವಾಗತಿಸಿದರು. ರವೂಫ್ ಕೆ.ಎಂ ವಂದಿಸಿದರು.