ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ 3ನೇ ಹಂತದ ಕಾರ್ಯಯೋಜನೆಗೆ ಸಿದ್ದತೆ

0

ಶ್ರೀ ಮಹಾಮ್ಮಾಯಿ, ಶ್ರೀ ಕಲ್ಲುರ್ಟಿ ದೈವದ ಗುಡಿ ಮೇಲ್ಛಾವಣಿಗೆ ತಾಮ್ರದ ಹೊದಿಕೆಗೆ ವಿಜ್ಞಾಪನೆ ಪತ್ರ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ 2ನೇ ಹಂತದ ಜೀರ್ಣೋದ್ಧಾರದ, ಅಭಿವೃದ್ಧಿ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆದಿದ್ದು, ಇದೀಗ 3ನೇ ಹಂತದ ಕಾರ್ಯಯೋಜನೆಯಲ್ಲಿ ಶ್ರೀ ಮಹಾಮ್ಮಾಯಿ ದೈವದ ಗುಡಿ ಮತ್ತು ಶ್ರೀ ಕಲ್ಲುಡ್ಕ ದೈವದ ಗುಡಿ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಮಾಡುವ ಹಾಗು ಇತರ ಅಭಿವೃದ್ಧಿ ಕೆಲಸ ಕಾರ್ಯಗಳ ಕುರಿತು ವಿಜ್ಞಾಪನ ಪತ್ರವನ್ನು ಡಿ.2ರಂದು ಕಲ್ಲೇಗ ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಬೆಳಿಗ್ಗೆ ದೈವಸ್ಥಾನದಲ್ಲಿ ಪ್ರಾರ್ಥನೆಯ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಅಪ್ಪಣೆಯನ್ನು ಪಡೆಯಲಾಯಿತು. ಕಲ್ಲೇಗ ಗುತ್ತು ಅಜಿತ್ ಕುಮಾರ್ ಜೈನ್, ನಗರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರೂ ಆಗಿರುವ ಕೆ.ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲೆಪ್‌ಮೆಂಟ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ದೈವಗಳ ಪಾತ್ರಿ ಜಿನ್ನಪ್ಪ ಗೌಡ ಕಲ್ಲೇಗ ಅವರು ಪ್ರಾರ್ಥನೆ ಮಾಡಿದರು.

ಈ ಸಂದರ್ಭ ದೈವಸ್ಥಾನದ ಆಡಳಿತಾಧಿಕಾರಿ ಕಬಕ ಗ್ರಾ.ಪಂ ವಿ.ಎ ಆಗಿರುವ ಜಂಗಪ್ಪ, ಅಭಿವೃದ್ಧಿ ಕೆಲಸ ಕಾರ್ಯಗಳ ಸಮಿತಿ ಸದಸ್ಯರಾದ ಅಣ್ಣಿ ಪೂಜಾರಿ ಪಟ್ಲ, ಪ್ರಶಾಂತ್ ಸಪಲ್ಯ ಮುರ, ನಗರಸಭಾ ಸದಸ್ಯ ದಿನೇಶ್ ಶೇವಿರೆ, ನವೀನ್ ಪೆರಿಯತ್ತೋಡಿ, ದೈವಸ್ಥಾನದ ಚಾಕ್ರಿಯವರಾದ ಚಂದ್ರಶೇಖರ್ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here