ಅರಿಯಡ್ಕ: ಕೌಡಿಚ್ಚಾರು ಭಜನಾ ಮಂದಿರ ರಸ್ತೆಗೆ ಕಾಂಕ್ರಿಟೀಕರಣ

0

ಶಾಸಕರ ಅನುದಾನದಲ್ಲಿ ಹಲವು ರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿದೆ-ಇಕ್ಬಾಲ್ ಹುಸೇನ್

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಅನುದಾನದಲ್ಲಿ ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ರಸ್ತೆಗೆ ರೂ.5 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ಪೂರ್ಣಗೊಂಡಿದೆ.

ಇನ್ನುಳಿದಂತೆ ರೂ.15 ಲಕ್ಷ ಅನುದಾನದಲ್ಲಿ ಕೌಡಿಚ್ಚಾರು-ಕುತ್ಯಾಡಿ-ಮಾಯಿಲಕೊಚ್ಚಿ ರಸ್ತೆ, ರೂ.15 ಲಕ್ಷ ಅನುದಾನದಲ್ಲಿ ಪಾದಲಾಡಿ-ಗುಂಡ್ಯಡ್ಕ ಸಂಪರ್ಕ ರಸ್ತೆ, ರೂ. 10 ಲಕ್ಷ ಅನುದಾನದಲ್ಲಿ ಕೌಡಿಚ್ಚಾರು ಸಿಆರ್‌ಸಿ ಕಾಲನಿ ರಸ್ತೆಯ ಕಾಮಗಾರಿಗಳು ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ರಸ್ತೆಗಳ ವಿಚಾರವಾಗಿ ನಮ್ಮ ಬೇಡಿಕೆಯನ್ನು ಶಾಸಕ ಅಶೋಕ್ ರೈಯವರು ಈಡೇರಿಸುತ್ತಿದ್ದು ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಇನ್ನಷ್ಟು ಕಾಮಗಾರಿಗಳು ಆಗಲಿದೆ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here