ಫೆಂಗಲ್ ಚಂಡಮಾರುತ- ಭಾರೀ ಮಳೆ ಹಿನ್ನೆಲೆ – ಒಳಮೊಗ್ರು ಗ್ರಾಪಂನಿಂದ ಸಾರ್ವಜನಿಕರಿಗೆ ಸೂಚನೆ

0

ಪುತ್ತೂರು: ತಮಿಳುನಾಡು ಭಾಗದಲ್ಲಿ ಸಾಕಷ್ಟು ಹಾನಿಯುಂಟು ಮಾಡಿರುವ ಫೆಂಗಲ್ ಚಂಡಮಾರುತ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಫೆಂಗಲ್ ಚಂಡಮಾರುತ ಸದ್ಯ ಮಂಗಳೂರು ಭಾಗದ ಅರಬ್ಬೀ ಸಮುದ್ರದಲ್ಲಿ ಇದ್ದು ಬಳಿಕ ಇದು ಸಮುದ್ರದ ಮಧ್ಯೆ ತೆರಳಿ ಕೊನೆಗೊಳ್ಳಲಿದೆ. ಚಂಡಮಾರುತದ ಪ್ರಭಾವದಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಲಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಒಳಮೊಗ್ರು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.

ಪ್ರಾಕೃತಿಕ ವಿಕೋಪದಿಂದ ಗ್ರಾಮದಲ್ಲಿ ಯಾವುದೇ ರೀತಿಯ ತುರ್ತು ಘಟನೆಗಳು ಸಂಭವಿಸಿದ್ದಲ್ಲಿ ಅಥವಾ ಸಂಭವಿಸುವ ಸಾಧ್ಯತೆ ಕಂಡು ಬಂದಲ್ಲಿ ತಕ್ಷಣವೇ ಗ್ರಾಮ ಪಂಚಾಯತ್ ಗಮನಕ್ಕೆ ತರುವಂತೆ ವಿನಂತಿಸಲಾಗಿದೆ. ಗ್ರಾಮದ ಜನರ ಸುರಕ್ಷತೆ ದೃಷ್ಟಿಯಿಂದ ಗ್ರಾಪಂ ಎಲ್ಲಾ ವಿಧದಲ್ಲೂ ಸನ್ನದ್ಧವಾಗಿದ್ದು ಗ್ರಾಮದಲ್ಲಿ ಅಪಾಯಕಾರಿ, ತುರ್ತು ಘಟನೆಗಳು ಕಂಡುಬಂದಲ್ಲಿ ಗ್ರಾಮಸ್ಥರು ಗ್ರಾ.ಪಂ. ಅಧ್ಯಕ್ಷರು ಮೊಬೈಲ್ 9686807179 ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೊ.9945126270 ಅಥವಾ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ ತರುವಂತೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here