ರಾಮಕುಂಜ: ಹಿಮಾಯತುಲ್ ಇಸ್ಲಾಂ ಕಮಿಟಿ, ಖುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಇದರ ಅಧ್ಯಕ್ಷರಾಗಿ ಎಸ್. ಅಬ್ದುಲ್ ರಹಿಮಾನ್ ಹಾಗೂ ಪ್ರಧಾನ ಕಾರ‍್ಯದರ್ಶಿಯಾಗಿ ಕೆ.ಕೆ.ನಝೀರ್ ಆಯ್ಕೆಯಾಗಿದ್ದಾರೆ.
ಮಸೀದಿ ಸಮಿತಿಯ ಗೌರವಾಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ ಕೇರಳ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಹಮ್ಮದ್ ರಫೀಕ್ ಜಿ., ಸಿದ್ದಿಕ್ ನೀರಾಜೆ, ಕಾರ್ಯದರ್ಶಿಗಳಾಗಿ ಝಿಯಾದ್, ಝಕರಿಯಾ ನೇರೆಂಕಿ, ಕೋಶಾಧಿಕಾರಿಯಾಗಿ ಹಸೈನಾರ್ ಹಾಜಿ, ಲೆಕ್ಕ ಪರಿಶೋಧಕರಾಗಿ ಎಸ್.ಪಿ. ಕಲಂದರ್, ಸದಸ್ಯರಾಗಿ ಬಿ.ಆದಂ ಹಾಜಿ, ಎಸ್. ಆದಂ ಹಾಜಿ, ಜಿ. ಇಸ್ಮಾಯಿಲ್, ಪಿ. ಯಾಕೂಬ್ ಕುಂಟಲ್ತಡಿ, ಜಿ.ಎಂ.ಆರ್. ರಝಾಕ್, ಅಬ್ದುಲ್ ರಝಾಕ್ ಮರ‍್ವೇಲ್, ಕೆ.ಕೆ. ಜಲೀಲ್, ಇಸಾಕ್ ಬೊಳುಂಬುಡ, ರಝಾಕ್ ಎಸ್., ಹಂಝ ಪಾಲ್ತಾಜೆ, ಸೌಕತ್ ಆಲಿ, ಎಸ್. ನಿಝಾರ್, ಸಿದ್ದಿಕ್ ಎ.ಜಿ. ಆಯ್ಕೆಯಾಗಿದ್ದಾರೆ.