





ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಚಾರ್ವಾಕ ಸ.ಉ.ಹಿ.ಪ್ರಾ.ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ವಿದ್ಯಾನಿಧಿ ಪ್ರತಿಭಾ ಪುರಸ್ಕಾರದ ಮೊತ್ತವನ್ನು ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ ಬಾರೆಂಗಳರವರು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಣೂರು, ಶಾಲಾ ಮುಖ್ಯಶಿಕ್ಷಕ ರಾಮೇಶಿ ಎಸ್, ಸಂಘದ ಉಪಾಧ್ಯಕ್ಷ ಕುಸುಮಾಧರ ಗೌಡ ಇಡ್ಯಡ್ಕ ನಿರ್ದೇಶಕ ರಾಮಣ್ಣ ಗೌಡ ಪೊನ್ನೆತ್ತಡಿ, ಶಾಲಾ ಸಹಶಿಕ್ಷಕರಾದ ಚೆನ್ನಪ್ಪ ಗೌಡ ಪಿ, ಆಶಾಲತಾ, ನಯನ ಕುಮಾರಿ, ಹರ್ಷಿತಾ, ಜೀವಿತಾ ಉಪಸ್ಥಿತರಿದ್ದರು












