ಜಗತ್ತಿನೆಲ್ಲಡೆ ಇರುವ ಪುತ್ತೂರಿನವರು ಓದುವ ತಾಲೂಕಿನ ನಂ.1 ಕನ್ನಡ ದಿನಪತ್ರಿಕೆ
ಪುತ್ತೂರು: ಸುದ್ದಿ ಯುಟ್ಯೂಬ್ ಚಾನೆಲ್, ಕೇಬಲ್ ಚಾನೆಲ್, ವೆಬ್ ಸೈಟ್, ಮಾಹಿತಿ ಕೇಂದ್ರ, ಕೃಷಿ ಅರಿವು ಕೇಂದ್ರ ಸಹಿತ ಹಲವು ಕ್ಷೇತ್ರದಲ್ಲಿ ಕಾರ್ಯಚರಿಸುತ್ತಿರುವ ಸುದ್ದಿ ಬಿಡುಗಡೆ ದಿನ ಪತ್ರಿಕೆಯ ವತಿಯಿಂದ ರಾಷ್ಟ್ರೀಯ ಸಹಿತ ಸ್ಥಳೀಯ ಕಾರ್ಯಕ್ರಮಗಳ ಮಾಹಿತಿಯನ್ನೊಳಗೊಂಡು ಹೊರ ತರಲಾದ 2025ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜ.1ರಂದು ಸುದ್ದಿ ಬಿಡುಗಡೆ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಡಾ.ಯು.ಪಿ. ಶಿವಾನಂದ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭ ಶೋಭಾ ಶಿವಾನಂದ್, ಸಿಇಒ ಸೃಜನ್ ಊರುಬೈಲು, ಸಿಬ್ಬಂದಿಗಳಾದ ಶ್ರೀಧರ್ ರೈ ಕೋಡಂಬು, ನರೇಶ್ ಜೈನ್, ಲೋಕೇಶ್ ಬನ್ನೂರು, ಚಂದ್ರಕಾಂತ್ ಉರ್ಲಾಂಡಿ, ಯತೀಶ್ ಉಪ್ಪಳಿಗೆ, ಮೋಹನ್ ಶೆಟ್ಟಿ, ವಸಂತ್ ಸಾಮೆತ್ತಡ್ಕ, ಪ್ರಶಾಂತ್ ಮಿತ್ತಡ್ಕ, ಪ್ರಜ್ವಲ್, ಪಿ.ಎಸ್ ಭಟ್, ಶೈಲಜಾ ಸುದೇಶ್, ವಸಂತ ಸಾಮೆತ್ತಡ್ಕ, ಕವಿತಾ ವಿಶ್ವನಾಥ್, ರಕ್ಷಿತಾ, ಅಕ್ಷತಾ, ಚಿತ್ರಾಂಗಿನಿ, ಕಾವ್ಯ, ಜಯಲಕ್ಷ್ಮೀ, ಶ್ವೇತಾ, ಪ್ರೀತಾ, ಪುಟಾಣಿ ಆತ್ಮಿ ಉಪಸ್ಥಿತರಿದ್ದರು.