ಪುತ್ತೂರು: ಪುಣ್ಚಪ್ಪಾಡಿ ಸಾರಕರೆಬೀಡು ಮನೆಯಲ್ಲಿ ಶ್ರೀ ಧರ್ಮರಸು ಉಳ್ಳಾಕುಲು ಹಾಗೂ ಪರಿವಾರದೈವಗಳ ಜಾತ್ರೋತ್ಸವದ ಸಿದ್ದತೆಯ ಬಗ್ಗೆ ಸಭೆ ನಡೆಯಿತು.
ಸಾರಕರೆ ಪುಣ್ಚಪಾಡಿಯ ಗ್ರಾಮಸ್ಥರು ಎಲ್ಲರೂ ಸೇರಿ ಫೆಬ್ರವರಿ 14 ಮತ್ತು 15 ರಂದು ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರದ ದೈವಗಳ ಜಾತ್ರೋತ್ಸವವನ್ನು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜ್ರಂಭಣೆಯಿಂದ ಜರಗಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ಪುಣ್ಚಪ್ಪಾಡಿ ನೇರೋಳ್ತಡ್ಕದಿಂದ ಹಸಿರುವಾಣಿ ಮೆರವಣಿಗೆ ಆರಂಭಿಸಿ ಕಲ್ಲಮಾಡದಲ್ಲಿ ಸಮಾಪ್ತಿಗೊಂಡು ಮುಂದೆ ವಿವಿಧ ಕಾರ್ಯಕ್ರಮಗಳು ಪೂಜಾ ವಿಧಿ ವಿಧಾನಗಳು ನಡೆಸುವುದೆಂದು ತೀರ್ಮಾನಿಸಲಾಯಿತು. ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರದೈವಗಳ ಆಡಳಿತ ಮೋಕ್ತೇಸರ ಕೊಮ್ಮಂಡ ಮಹಾಬಲ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.