ಆಲಂಕಾರು: ಅಪಘಾತವೊಂದರಲ್ಲಿ ಮೃತಪಟ್ಟ ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀಜೀಶ್‌ರವರ ಸ್ಮರಣಾರ್ಥ ’ಶ್ರೀಜೀಶ್ ಟ್ರೋಫಿ 2025’ಕ್ರಿಕೆಟ್ ಪಂದ್ಯಾಟ ಜ.12ರಂದು ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟವನ್ನು ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಉದ್ಘಾಟಿಸಿದರು. ಬಳಿಕ ಪಂದ್ಯಾಟ ನಡೆಯಿತು. ಪ್ರಥಮ ಬಹುಮಾನ ರೂ.15ಸಾವಿರ ನಗದು ಹಾಗೂ ಶ್ರೀಜೀಶ್ ಟ್ರೋಫಿಯನ್ನು ಇಲೆವೆನ್ ಇಳಂತಿಲ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನ ರೂ.8 ಸಾವಿರ ಹಾಗೂ ಶ್ರೀಜೀಶ್ ಟ್ರೋಫಿಯನ್ನು ಶ್ರೀಜೀಶ್ ಬ್ರದರ‍್ಸ್ ಸಜೀಪ ತಂಡ ಪಡೆದುಕೊಂಡಿತು. ಫ್ರೆಂಡ್ಸ್ ಕೆಯ್ಯೂರು ತಂಡ ತೃತೀಯ ಬಹುಮಾನ ಹಾಗೂ ಬ್ರದರ‍್ಸ್ ಕಲ್ಲೇರಿ ತಂಡ ಚತುರ್ಥ ಬಹುಮಾನ ಪಡೆದುಕೊಂಡಿತು.
ಮುಖ್ಯ ಅತಿಥಿಗಳಾಗಿ ಅಕ್ರಮ ಸಕ್ರಮ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಶ್ರೀಧರ್ ಕಾಯರ್‌ತಡ್ಕ, ರಾಮಕುಂಜ ಅಂಗನವಾಡಿ ಕಾರ್ಯಕರ್ತೆ ಯಮುನಾ ಕೆ., ಲೋಕೇಶ್ ಕಲ್ಲೇರಿ ಉಪಸ್ಥಿತರಿದ್ದರು. ಸುಪ್ರಿತ್ ಅಮೈ ಸ್ವಾಗತಿಸಿ, ವಂದಿಸಿದರು. ದೀರಜ್, ಸಂದೀಪ್, ಶ್ಯಾಮ್‌ಸುಂದರ್, ಅಕ್ಷಿತ್, ರಕ್ಷಿತ್, ದಾಮೋದರ, ಸುಕೇಶ್, ಜಗದೀಶ್, ಕೇಶವ ಪಾಣೇರು ಸಹಕರಿಸಿದರು. ಒಟ್ಟು 32 ತಂಡಗಳು ಭಾಗವಹಿಸಿದ್ದವು.